Chief Editor
Manohar. R (Manu)
Photo Journalist
chitrataramanu@gmail.com
+91 9845549026
ತನಿಖೆ ಹಾಡಿಗೆ ಜನ ಮೆಚ್ಚುಗೆ
Posted date: 07 Thu, May 2020 – 12:20:01 PM

ಕರ್ನಾಟಕದಲ್ಲಿ ಈಗ ಕೋರೋನಾ ೧೯ ವೈರಸ್ 41 ದಿವಸದ ಲಾಕ್ ಡೌನ್ ಸಡಿಲ ಆದ ಮೇಲೆ ಮಧ್ಯ ಮಾರಾಟಕ್ಕೆ ನೂಕು ನುಗ್ಗಲು ಶುರು ಆಗಿ ಬಿಟ್ಟಿದೆ. ಆದರೆ ಈ ಮಧ್ಯ ಸಂಬಂದಿ ಒಂದು ಹಾಡು ಸಹ ‘ತನಿಖೆ’ ಚಿತ್ರದ್ದು ಯು ಟ್ಯೂಬ್ ಅಲ್ಲಿ ಬಹಳ ಪ್ರಸಿದ್ದಿ ಆಗಿದೆ. ಅದೇ ‘ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ....ಗೀತೆ ನವೀನ್ ಸಜ್ಜು ಅವರು ಹಾಡಿರುವುದು ಸಕ್ಕತ್ ವೈರಲ್ ಆಗಿ ಲಕ್ಷಾಂತರ ಕೇಳುಗರನ್ನು ಹಾಗೂ ನೋಡುಗರನ್ನು ಸಂಪಾದಿಸಿಕೊಂಡಿದೆ. ಇದೆ ಹಾಡು ಟಿಕ್ ಟಾಕ್ ಅಲ್ಲೂ ಸಹ ರಂಜನೆಗೆ ಬಳಸಲಾಗುತ್ತಿದೆ. ಜೀ ಮ್ಯೂಜಿಕ್ ಅಡಿಯಲ್ಲಿ ಈ ‘ತನಿಖೆ’ ಚಿತ್ರದ ಹಾಡುಗಳು ಬಿಡುಗಡೆ ಆಗಿದೆ.

`ತನಿಖೆ` ಕನ್ನಡ ಸಿನಿಮಾ ಸೆನ್ಸಾರ್ ಇಂದ ಮನ್ನಣೆ ಸಹ ಪಡೆದುಕೊಂಡು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕೋರೋನಾ ೧೯ ವೈರಸ್ ಲಾಕ್ ಡೌನ್ ಇಂದ ಬಿಡುಗಡೆಯನ್ನು ಜುಲೈ ಅಥವಾ ಆಗಸ್ಟ್ ತಿಂಗಳಿಗೆ ಎಂದು ನಿರ್ಮಾಪಕ ಕಲಿ ಗೌಡ ಅವರು ತಿಳಿಸಿದ್ದಾರೆ. ಕಲಿ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.

`ತನಿಖೆ` ಪಕ್ಕ ಕಮರ್ಷಿಯಲ್ ಸಿನಿಮಾ ನಾಲ್ಕು ಸಾಹಸ ಸನ್ನಿವೇಶ ಅಲ್ಟಿಮೇಟ್ ಶಿವು ನಿರ್ವಹಿಸಿದ್ದಾರೆ, ಕ್ರಿಸ್ಟೋಫರ್ ಲೀ ಸಂಗೀತ ನಿರ್ದೇಶನದಲ್ಲಿ ಸಂತೋಷ್ ವೆಂಕಿ `ಒಟ್ಟಾರೆ....ಹಾಡನ್ನು, ಯಾರೋ ಇವಳು ಗೆಳೆಯ...ಚಿಂತನ್ ವಿಕಾಸ್, ಎಣ್ಣೆ ಹೊಡೆಯೋದ...ನವೀನ್ ಸಜ್ಜು ಹಾಗೂ ಯಾರೋ ನೀನು....ವಾಣಿ ಹರಿಕೃಷ್ಣ ಹಾಡಿದ್ದಾರೆ.

`ತನಿಖೆ` ಹಳ್ಳಿಯಲ್ಲಿ ನಡೆಯುವ ಆರು ಯುವ ಸ್ನೇಹಿತರ ಜೀವನ ಪಯಣ. ಆರರಲ್ಲಿ ಒಬ್ಬ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ಹುಡುಗಿ ಮಿಕ್ಕ ಐವರಲ್ಲಿ ಒಬ್ಬನನ್ನು ಪ್ರೀತಿ ಮಾಡುತ್ತಾ ಇರುತ್ತಾಳೆ. ಪ್ರೀತಿಯ ವಿಚಾರದಲ್ಲಿ ಸ್ನೇಹಿತರರಲ್ಲಿ ಮನಸ್ತಾಪ ಹರಡುತ್ತದೆ. ಆಕಸ್ಮಿಕವಾಗಿ ಆರು ಸ್ನೇತರಲ್ಲಿ ಒಬ್ಬನ ಹತ್ಯೆ ಸಹ

ಆಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಹಳ್ಳಿಯನ್ನು ಬಿಡುವಂತೆ ಆಗುತ್ತದೆ. ಆನಂತರ `ತನಿಖೆ` ಆಗಿ ಐವರನ್ನು ಸಹ ಅರ್ರೆಸ್ಟ್ ಮಾಡಲಾಗುವುದು.

`ತನಿಖೆ`ಮಾಡುವಾಗ ಅನೇಕ ತಿರುವುಗಳು ಚಿತ್ರಕತೆಯಲ್ಲಿ ಅನಾವರಣ ಆಗುತ್ತಾ ಹೋಗುತ್ತದೆ. `ತನಿಖೆ` ಚಿತ್ರದ ಕಥೆ, ಚಿತ್ರಕಥೆ, ಗೀತರಚನೆ ಹಾಗೂ

ನಿರ್ದೇಶನ ಕಲಿ ಗೌಡ ಅವರೇ ಮಾಡಿದ್ದಾರೆ. ಶ್ಯಾಮ್ ಸಿಂದನೂರ್ ಛಾಯಾಗ್ರಹಣ, ಸಂಕಲನ ಹಾಗೂ ಡಿ ಐ ಕೆಲಸವನ್ನು ವೇದ್ ನಿರ್ವಹಿಸಿದ್ದಾರೆ.

ತಾರಾಗಣದಲ್ಲಿ ಅನಿಲ್ ಕುಮಾರ್, ಗುಲ್ಶನ್, ಚಂದನ, ಮುನಿರಾಜು, ಸಂತೋಷ್ ಜಯಕುಮಾರ್, ಪ್ರಭಿಕ್ ಮೊಗವೀರ್, ನಿಖಿಲ್, ಕಾಲ್ಕೆರೆ ಗಂಗಾಧರ್, ಅಪ್ಪು ಬಡಿಗರ್, ಗೋಪಿ ಹಾಗೂ ಇತರರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ತನಿಖೆ ಹಾಡಿಗೆ ಜನ ಮೆಚ್ಚುಗೆ - Chitratara.com
Copyright 2009 chitratara.com Reproduction is forbidden unless authorized. All rights reserved.