Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಾಸನ ಗರಡಿಯ ಹುಡಗನ `ಟಕ್ಕರ್` ಹಾಡುಗಳು ಸಧ್ಯದಲ್ಲೇ ಬರಲಿವೆ
Posted date: 01 Thu, Aug 2019 02:04:52 PM

ಕೆ.ಎನ್. ನಾಗೇಶ್ ಕೋಗಿಲು ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಎರಡನೇ ಚಿತ್ರ ಟಕ್ಕರ್. ವಿ.ರಘುಶಾಸ್ತ್ರಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಟ ದರ್ಶನ್ ಅವರ ಅಳಿಯ ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ಜೋಡಿಯಾಗಿ ನಟಿಸಿದ್ದಾರೆ. ಥ್ರಿಲ್ಲರ್ ಮತ್ತು ಸಾಹಸಪ್ರಧಾನ ಅಂಶಗಳನ್ನು ಒಳಗೊಂಡಿರುವ ‘ಟಕ್ಕರ್ನಲ್ಲಿ ಮೂರು ಹಾಡುಗಳಿವೆ. ಡಾ. ವಿ ನಾಗೇಂದ್ರ ಪ್ರಸಾದ್ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್ ಹಾಡಿದರೆ, ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನು ಶಶಾಂಕ್ ಶೇಷಗಿರಿ ಹಾಡಿದ್ದಾರೆ.

ಸ್ಫೂರ್ತಿದಾಯಕ ಗೀತೆಯನ್ನು ಯುವ ಹಾಡುಗಾರ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು, ಹೆಸರಾಂತ ಆಡಿಯೋ ಕಂಪೆನಿಯೊಂದು ಉತ್ತಮ ಮೊತ್ತಕ್ಕೆ ಹಕ್ಕು ಪಡೆಯಲು ಈಗಾಗಲೇ ಮಾತುಕತೆ ನಡೆಸಿದೆ.

ಇದು ತಂತ್ರಜ್ಞಾನದು ಯುಗ. ನಮ್ಮ ಮನೆ ಹೆಣ್ಣುಮಕ್ಕಳ ಮೇಲೆ ಕಣ್ಣಿಡಲು ಬೇರೆ ಯಾರೋ ಆಗಂತುಕರು ಎಂಟ್ರಿ ಕೊಡುವುದಿಲ್ಲ. ನಾಲ್ಕು ಗೋಡೆಗಳ ನಡುವೆ, ಕೈಲಿರುವ ಮೊಬೈಲು ಮತ್ತು ಕಂಪ್ಯೂಟರ್ ಲ್ಯಾಪ್‌ಟಾಪ್‌ಗಳು ಅವರ ಮಾನ, ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂಬ ಗಂಭೀರ ವಿಚಾರದ ಸುತ್ತ ‘ಟಕ್ಕರ್ ಚಿತ್ರದ ಮೂಲಕ ಹೇಳ ಹೊರಟಿದ್ದೇವೆ ಎಂದು ನಿರ್ದೇಶಕ ವಿ.ರಘು ಶಾಸ್ತ್ರಿ ತಿಳಿಸಿದ್ದಾರೆ. ಗ್ರಾಫಿಕ್ಸ್, ಡಿಐ, ಹಿನ್ನೆಲೆ ಸಂಗೀತದ ಕೆಲಸ ಈಗಾಗಲೇ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ‘ಟಕ್ಕರ್ ಸೆನ್ಸಾರ್‌ಗೆ ಹೋಗಲಿದೆ.

ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ವಿ. ರಘುಶಾಸ್ತ್ರಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಈಟಿವಿ ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್,  ಕುರಿ ಸುನಿಲ್, ಜೈಜಗದೀಶ್ ಮುಂತಾದವರ ತಾರಾಬಳಗವಿದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಾಸನ ಗರಡಿಯ ಹುಡಗನ `ಟಕ್ಕರ್` ಹಾಡುಗಳು ಸಧ್ಯದಲ್ಲೇ ಬರಲಿವೆ - Chitratara.com
Copyright 2009 chitratara.com Reproduction is forbidden unless authorized. All rights reserved.