Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾನು ಮತ್ತು ಗುಂಡ ಎರಡನೇ ಹಂತ ಪ್ರಾರಂಭ
Posted date: 10 Tue, Oct 2017 08:29:26 AM

ಇದೊಂದು ವಿಶೇಷ ಕಥಾ ವಸ್ತು ಒಳಗೊಂಡ ಸಿನೆಮಾ. ಮನುಷ್ಯ ಹಾಗೂ ನಾಯಿಯ ಸುತ್ತ ಹಣೆದಿರುವ ಕಥೆ. ನಿಯತ್ತಿನ ನಾಯಿಯ ಬಗ್ಗೆ ನೀವು ತಿಳಿಯಬೇಕಾದರೆ ಈ ಚಿತ್ರವನ್ನ ನೋಡಬೇಕು. ಮನುಷ್ಯನ ಜೊತೆ ಒಂದು ಶ್ವಾನದ ಅನೇಕ ಪ್ರಸಂಗಗಳು ನೋಡುಗರಿಗೆ ಕಣ್ಣು ತೆರೆಸುವ ರೀತಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ ಪೊಯಮ್ ಪ್ರೊಡಕ್ಷನ್ ನಿರ್ಮಾಪಕ ರಘು ಹಾಸನ್ ಹಾಗೂ ನಿರ್ದೇಶಕ ಶ್ರೀನಿವಾಸ ತಿಮ್ಮಯ್ಯ.

 

ಈಗಾಗಲೇ 40 ದಿವಸಗಳ ಚಿತ್ರೀಕರಣದಲ್ಲಿ ಮೊದಲ ಹಂತದ ಚಿತ್ರೀಕರಣವನ್ನು ಸೆಪ್ಟೆಂಬರ್ 17 ರಿಂದ 15 ದಿವಸಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇದೆ ತಿಂಗಳ 9 ರಿಂದ ಅಕ್ಟೋಬರ್ 22 ವರೆಗೆ ಎರಡನೇ ಹಂತದ ಚಿತ್ರೀಕರಣ ಮಾಡಲಾಗುವುದು.  ಹಾಸನ, ಚನ್ನರಾಯಪಟ್ಟಣ, ಹಿರಿಸಾವೆ,ಶ್ರವಣಬೆಳಗೊಳ, ಕಾಂತರಾಜಪುರ, ಶೆಟ್ಟರ ಹಳ್ಳಿ ಚರ್ಚ್, ಆದಿ ಚುಂಚನಗಿರಿ, ಯೆಡಿಯೂರು,ಅಕ್ಕನಹಳ್ಳಿ, ಸಕಲೆಶಪುರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುವುದು.

 

ಕಾಮಿಡಿ ಕಿಲಾಡಿಗಳು ಇಂದ ಖ್ಯಾತಿ ಪಡೆದ ಶಿವರಾಜ ಕೆ ಆರ್ ಪೇಟೆ, ಸಂಯುಕ್ತ ಹೊರನಾಡು ಮುಖ್ಯ ತಾರಾಗಣ ಅಲ್ಲದೆ ಗೋವಿಂದೆ ಗೌಡ, ರಾಕ್ಲೈನ್ ಸುಧಾಕರ, ಸಿಂಬ, ಗುಂಡ, ವಿಧ್ಯಾಧರ,ಮಮತ,ಪ್ರಶ್ವಿತ, ಅಡ್ಡ ರಮೇಶ್, ಜ್ಯೋತಿ ಮರೂರ್, ಚಂದ್ರಿಕ ತಾರಾಗಣದಲ್ಲಿ ಇದ್ದಾರೆ.

 

ವಿವೇಕಾನಂದ ಅವರ ಕಥೆಗೆ ರಘು ಹಾಸನ್, ಶ್ರೀನಿವಾಸ್ ತಿಮ್ಮಯ್ಯ, ವಿವೇಕಾನಂದ ಚಿತ್ರಕಥೆ ರಚಿಸಿದ್ದಾರೆ, ಶರತ್ ಚಕ್ರವರ್ತಿ ಅವರ ಸಂಭಾಷಣೆ, ಕೆ ಎಂ ಪ್ರಾಕಾಶ್ ಅವರ ಸಂಕಲನ, ವಸ್ತ್ರ ವಿನ್ಯಾಸ ಕೆ ಗಣೇಶ್, ಮೇಕ್ ಅಪ್ ಕೃಷ್ಣಮೂರ್ತಿ ನಿರ್ವಹಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾನು ಮತ್ತು ಗುಂಡ ಎರಡನೇ ಹಂತ ಪ್ರಾರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.