Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಿರ್ಮಾಪಕ ಬಿ ಕೆ ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೇಟ್
Posted date: 12 Tue, Dec 2017 04:09:32 PM

ಜನಪ್ರಿಯ ಕನ್ನಡ ಸಿನಿಮಾಗಳ ನಿರ್ಮಾಪಕ (ಮಂದಾಕಿನಿ, ಅಲೆಮಾರಿ, ಭಾಗೀರಥಿ, ಡವ್, ಅಂಗುಲಿಮಾಲ) ಬಿ ಕೆ ಶ್ರೀನಿವಾಸ್ (ಬೆಂಕೊ ಶ್ರೀ) ಅವರಿಗೆ ಇಂಡಿಯನ್ ವರ್ಚುಯಲ್ ಯೂನಿವರ್ಸಿಟೀ ಫಾರ್ ಪೀಸ್ ಅಂಡ್ ಎಜುಕೇಶನ್ ಅಡಿಯಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ. ಈ ವಿಶ್ವವಿಧ್ಯಾನಿಲಯ ಜೇನಿವಾದ ವಿಶ್ವ ಸಂಸ್ಥೆ (ಯುನೈಟೆಡ್ ನೇಶನ್) ಗುರುತಿಸಲಾಗಿದ್ದು ಪ್ರತಿರೂಪವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತ ಸರ್ಕಾರದ ನೀತಿ ಆಯೋಗ ಸಹ ಇದನ್ನು ಪುರಸ್ಕರಿಸಿದೆ.

ಡಿಸೆಂಬರ್ 9 ಬಿ ಕೆ ಶ್ರೀನಿವಾಸ್ ಅವರ ಜನುಮ ದಿನ. ಅಂದೆ ಅವರಿಗೆ ಈ ಗೌರವ ಡಾಕ್ಟರೇಟ್ ಪುರಸ್ಕಾರ ಮೈಸೂರಿನ ಮಾನಸ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ನೀಡಲಾಗಿದೆ. ಭಾರತದಿಂದ 130 ವ್ಯಕ್ತಿಗಳನ್ನು ವಿವಿದ ರಂಗಗಳಲ್ಲಿ ಆಯ್ಕೆ ಮಾಡಿ ಈ ಗೌರವ ಡಾಕ್ಟರೇಟ್ ನೀಡಲಾಗುವುದು. ಬಿ ಕೆ ಶ್ರೀನಿವಾಸ್ ಅವರಿಗೆ ಸಿನಿಮಾ ನಿರ್ಮಾಣ ಹಾಗೂ ಅವರ ಪುಸ್ತಕನಂಬಿಕೆಯೇ ಜೀವನ ಗುರುತಿಸಿ ಈ ಗೌರವ ಡಾಕ್ಟರೇಟ್ ನೀಡಲಾಗಿದೆ.

ಬಿ ಕೆ ಶ್ರೀನಿವಾಸ್ ಗೌರವ ಡಾಕ್ಟರೇಟ್ ಪಡೆದ ಸಮಾರಂಭದಲ್ಲಿ ಮೈಸೂರಿನ ಮೇಯರ್ ಎಂ ಕೆ ರವಿಕುಮಾರ್, ನ್ಯಾಯದೀಶ ಚಂದ್ರಶೇಖರಯ್ಯ, ಸೆನೇಟ್ ಸಧಸ್ಯ  ಕೆ ಎಸ್ ರಂಗಪ್ಪ, ಮಾನವ ಹಕ್ಕು ಸಂಸ್ಥೆಯ ಮೈಸೂರು ವಿಭಾಗದ ಪುಷ್ಪ ಐಯಂಗಾರ್ ಉಪಸ್ಥಿತರಿದ್ದರು. 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿರ್ಮಾಪಕ ಬಿ ಕೆ ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.