Chief Editor
Manohar. R (Manu)
Photo Journalist
chitrataramanu@gmail.com
+91 9845549026
ನೀನಿಲ್ಲದ ಮಳೆ ನಾಳೆಯಿಂದ ತೆರೆಗೆ
Posted date: 18 Thu, Jan 2018 08:54:30 AM
ಮಾಸ್ ಮೂವೀಸ್ ಲಾಂಛನದಲ್ಲಿ ಡಾ ಶೈಲೇಂದ್ರ ಕೆ. ಬೆಲ್ದಾಳ್, ದೇವರಾಜ್ ಶಿಡ್ಲಘಟ್ಟ ಹಾಗೂ ಜನಾರ್ಧನ್ ನಿರ್ಮಿಸಿರುವ ನೀನಿಲ್ಲದ ಮಳೆ ಚಿತ್ರ ನಾಳೆಯಿಂದ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಆಧಾರವಾಗಿಟ್ಟುಕೊಂಡು ತಯಾರಾದ ಈ ಚಿತ್ರವನ್ನು ಅಮೋಘ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿಶಾಲ್ ಛಾಯಾಗ್ರಹಣ, ಇಂದ್ರ ಸೇನ ಸಂಗೀತ ಮತ್ತು ಸಂಭಾಷಣೆ, ಕವಿರಾಜ್ ಸಾಹಿತ್ಯ, ವಿಜಯ ಚೆಂಡೂರ್, ಶ್ರೀಕಾಂತ್ ಕಥೆ, ರವಿ ವರ್ಮಾ ಸಾಹಸ, ಮದನ್ ಹರಿಣಿ, ರಾಮು ನೃತ್ಯ ನಿರ್ದೇಶನವಿದೆ. ಅಮೋಘ್ ವ್ಯಾಲರಿ, ಗಿರೀಶ್ ಕಾರ್ನಾಡ್, ತಬಲಾ ನಾಣಿ, ಭವ್ಯಾ, ಮಂದೀಪ್ ರಾಯ್, ಲಕ್ಕಿ ಶಂಕರ್, ರಾಕ್‌ಲೈನ್ ಸುಧಾಕರ್, ಲಕ್ಷ್ಮಣ್, ಇತಿ ಆಚಾರ್ಯಾ, ಮೋನಿಕಾ ಮುಂತಾದವರ ತಾರಾ ಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನೀನಿಲ್ಲದ ಮಳೆ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.