Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಾನಿಪುರಿ ನಾಳೆಯಿಂದ ಬಿಡುಗಡೆ
Posted date: 16 Thu, Nov 2017 08:36:24 AM
ಖುಷಿ ಕಂಬೈನ್ಸ್  ಲಾಂಛನದಲ್ಲಿ ಪುಟ್ಟರಾಜು ನಿರ್ಮಿಸಿರುವ ಪಾನಿಪುರಿ ಚಿತ್ರವು ನಾಳೆಯಿಂದ  ರಾಜ್ಯಾಂದ್ಯಾಂತ ಬಿಡುಗಡೆಯಾಗುತ್ತಿದೆ. ಮೂವರು ಹುಡುಗರು ಹಾಗೂ ಮೂವರು ಹುಡುಗಿಯರ ಸ್ನೇಹ ಸಂಬಂಧದಿಂದ ಯಾವ ರೀತಿಯ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಥ್ರಿಲ್ಲರ್ ಕಂಟೆಂಟ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕೆ.ಪಿ. ನವೀನ್ ಕುಮಾರ್, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. 

ಚಿತ್ರಕ್ಕೆ ಆನಂದ್ ದಿಂಡವಾರ ಛಾಯಾಗ್ರಹಣ, ಸಂತೋಷ್ ಬಾಗಲಕೋಟೆ ಸಂಗೀತ, ವೆಂಕಿ ಯು.ಡಿ.ವಿ ಸಂಕಲನ, ರಾಮು ನೃತ್ಯ ನಿರ್ದೇಶನ, ವಿಕ್ರಮ್ ಸಾಹಸ, ಸಂತೋಷ್, ನವೀನ್ ಕುಮಾರ್ ಸಾಹಿತ್ಯವಿದೆ. ವೈಭವ್, ಜಗದೀಶ್, ಸಂಜಯ್, ಅಕ್ಷತಾ, ದರ್ಶಿನಿ, ಅನು, ರೋಬೋ ಗಣೇಶ್, ಪೆಟ್ರೋಲ್ ಪ್ರಸನ್ನ, ಸೂರ್ಯ, ಕಿರಣ್, ಪ್ರಕಾಶ್ ಶೆಣೈ, ವಂಶಿ, ಮಹೇಶ್ ಹಾಗೂ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ.  

 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಾನಿಪುರಿ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.