Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರಾರಂಭ ಚಿತ್ರದ ಟೈಟಲ್ ಟ್ರಾಕನ್ನು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಬಿಡುಗಡೆ ಮಾಡಲಾಯಿತು
Posted date: 05 Sat, Oct 2019 08:36:34 AM

ಮನೋರಂಜನ್ ರವಿಚಂದ್ರನ್ ಅವರು ನಾಯಕನಾಗಿ ನಟಿಸಿರುವ ಪ್ರಾರಂಭ ಚಿತ್ರದ ಟೈಟಲ್ ಟ್ರಾಕನ್ನು ನೆನ್ನೆ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆರ್.ಜೆ  ಸುನೀಲ್ ಆಗಮಿಸಿದ್ದರು. ಹಾಡಿಗೆ ಪ್ರಜ್ವಲ್ ಪೈ ಸಂಗೀತ ಜೊತೆಗೆ ಸ್ವತಃ ಅವರೇ ಹಾಡಿದ್ದಾರೆ. ಹಾಗೂ ಸಂತೋಷ್ ನಾಯ್ಕ್‌ರವರು ಸಾಹಿತ್ಯ ಒದಗಿಸಿದ್ದಾರೆ. ಹಾಡಿಗೆ ಕನ್ನಡದ ರ‍್ಯಾಪರ್ ಅಲೋಕ್ ಹಾಡಿರುವ ಸಾಲುಗಳು ಆಕರ್ಷಕವಾಗಿವೆ. ಚಿತ್ರಕ್ಕೆ ಮನು ಕಲ್ಯಾಡಿರವರು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ಜೇನುಶ್ರೀ ತನುಷ ಪ್ರೊಡಕ್ಷನ್ ಅಡಿಯಲ್ಲಿ ಜಗದೀಶ್ ಕಲ್ಯಾಡಿರವರು ನಿರ್ಮಾಣ ಮಾಡಿದ್ದಾರೆ. ಹಾಡಿನ ಬಿಡುಗಡೆಯ ನಂತರ ಮಾತನಾಡಿದ ನಾಯಕ ಮನೋರಂಜನ್ ಚಿತ್ರದ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಂತರ ಮೈಕ್ ತೆಗೆದುಕೊಂಡ ನಿರ್ದೇಶಕ ಮನು ಕಲ್ಯಾಡಿರವರು ಹಾಡಿನ ಬಗ್ಗೆ ಮತ್ತು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನು ಆಡಿದರು. ಹಾಡಿಗೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಾರಂಭ ಚಿತ್ರದ ಟೈಟಲ್ ಟ್ರಾಕನ್ನು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಬಿಡುಗಡೆ ಮಾಡಲಾಯಿತು - Chitratara.com
Copyright 2009 chitratara.com Reproduction is forbidden unless authorized. All rights reserved.