Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರೀತಿಯ ರಾಯಭಾರಿ ಜೂನ್ ತಿಂಗಳಲ್ಲಿ ಬಿಡುಗಡೆ
Posted date: 17 Wed, May 2017 09:35:47 AM

ನಾದ ಕಿರಣ್ ಪಿಕ್ಚರ್ಸ್ ಅಡಿಯಲ್ಲಿ ರೂಪುಗೊಂಡಿರುವ ‘ಪ್ರೀತಿಯ ರಾಯಭಾರಿ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಪ್ರೀತಿಗೆ ರಾಯಭಾರಿ ಕಣ್ಣೋ ಅಥವಾ ಹೃದಯವೋ? ಎಂಬುದೇ ಕುತೂಹಲ. ಈ ಒಂದು ಕೌತುಕದೊಂದಿಗೆ ನಿಜ ಜೀವನದಲ್ಲಿ ನಡೆದ ಘಟನೆಯ ಸುತ್ತ ಸುತ್ತುವ ಚಿತ್ರದ ಕಥಾ ವಸ್ತುವನ್ನು ಈ ಚಿತ್ರ ಹೊಂದಿದೆ. ವಾಹಿನಿಯಲ್ಲಿ ಪ್ರಸಾರವಾದ ಒಂದು ಕ್ರೈಂ ಸುದ್ದಿ ನವ ನಿರ್ದೇಶಕ ಎಂ ಎಂ ಮುತ್ತು ಅವರಿಗೆ ಪ್ರೇರಣೆ ನೀಡಿ ಕಥಾ ವಸ್ತು ರಚಿಸುವಂತೆ ಮಾಡಿದೆ. ಈ ಘಟನೆ ಜರುಗಿದ ಸ್ಥಳ ಹಿರಿಯೂರು. ಈ ಚಿತ್ರಕ್ಕಾಗಿ ಬಹುತೇಕ ಚಿತ್ರೀಕರಣ ಕತ್ತೆ ಹೊಳೆ ಸಮೀಪದಲ್ಲೇ ನಿರ್ದೇಶಕ ಮುತ್ತು ಅವರು ಮಾಡಿದ್ದಾರೆ. ಕೆಲವು ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿ ಐದು ಹಾಡುಗಳನ್ನು ಸಂಪೂರ್ಣಗೊಳಿಸಿ ಸಕಲ ತಾಂತ್ರಿಕ ಸೌಲಭ್ಯವನ್ನು ಚಿತ್ರಕ್ಕೆ ತುಂಬಿ ಇದೀಗ ಜೂನ್ ತಿಂಗಳಿನಲ್ಲಿ ‘ಪ್ರೀತಿಯ ರಾಯಭಾರಿ ಚಿತ್ರವನ್ನು ತೆರೆಗೆ ತರಬೇಕು ಎಂದು ತೀರ್ಮಾನಿಸಿದ್ದಾರೆ.
 
ನಿರ್ಮಾಪಕ ಎಸ್ ಆರ್ ವೆಂಕಟೇಶ್ ಅವರ ಪುತ್ರ ನಕುಲ್ ಕುಮಾರ್ ನೀನಾಸಮ್‌ನಲ್ಲಿ ವ್ಯಾಸಂಗ ಮಾಡಿದವರಿಂದ ತರಬೇತಿ ಪಡೆದು ಕ್ಯಾಮರಾ ಎದುರಿಸಿದ್ದಾರೆ.
 
ನಕುಲ್ ಇಲ್ಲಿ ಒಬ್ಬ ರೈತನ ಮಗನ ಪಾತ್ರ ಮಾಡುತ್ತಿದ್ದಾರೆ. ಬಹಳ ಮುಗ್ದ ವ್ಯಕ್ತಿ ಪ್ರೀತಿಯಲ್ಲಿ ಸಿಲುಕಿದ ನಂತರ ನಡೆಯುವ ಘಟನೆಗಳೇ ಚಿತ್ರದ ಕಥಾ ವಸ್ತು. ಮುದ್ದಾದ ಬೆಡಗಿ ಅಂಜನಾ ದೇಶ್ಪಾಂಡೆ ಚಿತ್ರದ ಕಥಾ ನಾಯಕಿ. ಮದನ್ ಈ ಚಿತ್ರದ ಖಳ ನಟ. ಚರಣ್ ರಾಜ್, ಪದ್ಮಜ ರಾವ್, ಸುಚೇಂದ್ರ ಪ್ರಸಾದ್, ಮುನಿ, ಸಾಧು ಕೋಕಿಲ, ವಿಕ್ಟರಿ ವಾಸು, ಲಕ್ಷ್ಮಿ ಸಿದ್ದಯ್ಯ ತಾರಾಗಣದಲ್ಲಿ ಇದ್ದಾರೆ.
ಈ ಚಿತ್ರದ ಕಥಾ ವಸ್ತುವನ್ನು ಕೇಳಿ ಹಿರಿಯ ನಟ ಚರಣ್ ರಾಜ್ ಅವರು ತೆಲುಗು ತಮಿಳು ಹಕ್ಕುಗಳನ್ನು ಕೇಳಿರುವುದು ಚಿತ್ರ ತಂಡದಲ್ಲಿ ಖುಷಿ ತಂದಿದೆ.
ಯೋಗರಾಜ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ರಾಜೇಶ್ ಕಟ್ಟ ಹಾಗೂ ದಿಲ್ ರಾಜ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ ಮಾಡಿದ್ದಾರೆ.
 


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರೀತಿಯ ರಾಯಭಾರಿ ಜೂನ್ ತಿಂಗಳಲ್ಲಿ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.