Chief Editor
Manohar. R (Manu)
Photo Journalist
chitrataramanu@gmail.com
+91 9845549026
ಫೆಬ್ರವರಿಯಲ್ಲಿ 18 ಟು 25 ಬಿಡುಗಡೆ
Posted date: 14 Tue, Jan 2020 – 11:31:48 AM

 ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಿತ್ರ  18 ರಿಂದ 25 . ಯೂಥ್ ಬೇಸ್ ಮಾಡಿಕೊಂಡು ಈ ಚಿತ್ರವನ್ನು ನಿರೂಪಿಸಲಾಗಿದೆ. ಇದೀಗ ಚಿತ್ರದ  ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಚಿತ್ರವನ್ನು ಬಿಡುಗಡೆ ಮಾಡಲು  ಸಿದ್ದತೆ ನಡೆಸಲಾಗಿದೆ.  ಇದೇ ತಿಂಗಳಲ್ಲಿ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸ್ಮೈಲ್‌ಶ್ರೀನು ಅವರು ತಿಳಿಸಿದ್ದಾರೆ. ಅಲ್ಲದೆ ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಕನ್ನಡ ಮತ್ತು ತೆಲುಗು ಸೇರಿ ಏಕಕಾಲಕ್ಕೆ ೨ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೂಲಕ ಈಗಿನ ಯುವ ಜನಾಂಗಕ್ಕೆ 18 ರಿಂದ 25 ರ ನಡುವಿನ ವಯಸಿನಲ್ಲಿ ತುಂಬಾ ಜಾಗೃತಿಯಿಂದಿರಬೇಕು ಎಂದು ಮೆಸೇಜ್ ನೀಡುತ್ತಿದ್ದಾರೆ.

ಈ ಹಿಂದೆ ತೂಫಾನ್ ಮತ್ತು ಬಳ್ಳಾರಿ ದರ್ಬಾರ್ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ   ಸ್ಮೈಲ್ ಶ್ರೀನು ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆದಿzರೆ. ಸ್ಮೈಲ್ ಜೋಹರ್ ಟಾಕೀಸ್ ಅಡಿಯಲ್ಲಿ  18 ರಿಂದ 25 ಸಿನಿಮಾ ತಯಾರಾಗಿದ್ದು, ಈಗಾಗಲೇ ಚಿತ್ರದ ಮೊದಲಪ್ರತಿ  ಹೊರಬಂದಿದೆ. ಈ ಚಿತ್ರದಲ್ಲಿ ಅಭಿರಾಮ ನಾಯಕನಾಗಿದ್ದು,  ಋಷಿ ತೇಜ, ಅಖಿಲ, ವಿದ್ಯಾಶ್ರೀ, ರಾಕ್‌ಲೈನ್ ಸುಧಾಕರ್, ಫಾರೂಖ್ ಖಾನ್, ನಾಗೇಶ್ವರರಾವ್, ಉದಯ ಭಾಸ್ಕರ್, ರವಿರಾಮ, ಪೊಲ ಶ್ರೀನಿವಾಸಬಾಬು, ಭಾಗ್ಯಶ್ರೀ ಹಾಗೂ ಇತರರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿzರೆ. ಈ ಚಿತ್ರದ ಹಾಡುಗಳಿಗೆ  ಚರಣ್ ಅರ್ಜುನ್ ಅವರ ಸಂಗೀತವಿದೆ, ಶಿವ ಕೆ.ನಾಯ್ಡು ಅವರ ಛಾಯಾಗ್ರಹಣ, ವಿ.ನಾಗೇಂದ್ರ ಪ್ರಸಾದ್, ಸ್ಮೈಲ್ ಶ್ರೀನು ಅವರ ಸಾಹಿತ್ಯ, ವೈಲೆನ್ಸ್ ವೇಲು ಅವರ ಸಾಹಸ, ಚಿರಂಜೀವಿ ಅವರ ನೃತ್ಯ ನಿರ್ದೇಶನವೂ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಫೆಬ್ರವರಿಯಲ್ಲಿ 18 ಟು 25 ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.