Chief Editor
Manohar. R (Manu)
Photo Journalist
chitrataramanu@gmail.com
+91 9845549026
ಫೇಸ್ 2 ಫೇಸ್ ಡಬ್ಬಿಂಗ್ ಮುಕ್ತಾಯ
Posted date: 09 Mon, Apr 2018 04:18:41 PM
ಶ್ರೀ ಬನಶಂಕರಿ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶ್ರೀಮತಿ ಸುಮಿತ್ರ ಬಿ.ಕೆ. ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ಫೇಸ್ 2 ಫೇಸ್ ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ನಗರದ ಬಾಲಾಜಿ ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು. 
ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭವು ಮೇ ಮೊದಲ ವಾರದಲ್ಲಿ ನಡೆಯಲಿದ್ದು, ಚಿತ್ರವು ಜೂನ್‌ನಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕಿ ಶ್ರೀಮತಿ ಸುಮಿತ್ರಾ ತಿಳಿಸಿದ್ದಾರೆ.
ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್‌ರಾವ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಡಾ||ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ಏಕ್‌ಕ್ವಾಬ್ ಸಂಗೀತ,  ಕ್ರೇಜಿ ಮೈಂಡ್ಸ್ ಸಂಕಲನ, ಬಾಬು ಖಾನ್ ಕಲೆ, ಪ್ರದೀಪ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್ ಜನಾರ್ಧನ್. 
ತಾರಾಗಣದಲ್ಲಿ ರೋಹಿತ್ ಭಾನುಪ್ರಕಾಶ್, ಪೂರ್ವಿಜೋಷಿ, ದಿವ್ಯಾ ಹುರುಡುಗ, ವೀಣಾಸುಂದರ್, ಗೋಪಾಲ್ ಕೃಷ್ಣ ದೇಶಪಾಂಡೆ, ರೂಪಗೌಡ, ಸುಚೇಂದ್ರ ಪ್ರಸಾದ್, ಆರ್ಯನ್, ಅರುಣ್ ಅಲೆಕ್ಸಾಂಡರ್, ಯಮುನಾ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಫೇಸ್ 2 ಫೇಸ್ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.