Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಡ್ಡಿಮಗನ್ ಲೈಫು ಚಿತ್ರಕ್ಕೆ ಯು ಸರ್ಟಿಫಿಕೆಟ್
Posted date: 26 Thu, Apr 2018 03:06:23 PM
ಗ್ರೀನ್ ಚಿಲ್ಲಿ ಎಂಟರ್‌ಟೈನ್‌ಮೆಂಟ್ಸ್ ಲಾಂಛನದಲ್ಲಿ ಪವನ್ ಕುಮಾರ್ ನಿರ್ಮಾಣದ ಬಡ್ಡಿಮಗನ್ ಲೈಫು ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು ಸರ್ಟಿಫಿಕೆಟ್ ನೀಡಿದೆ.  ಪವನ್ -ಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಲವಿತ್ - ಛಾಯಾಗ್ರಹಣ, ಆಶಿಕ್ ಅರುಣ್ -ಸಂಗೀತ, ಸಂಕಲನ-ಪವನ್‌ಕುಮಾರ್, ನಿರ್ವಹಣೆ - ಗಂಡಸಿ ನಾಗರಾನ್, ತಾರಾಗಣದಲ್ಲಿ - ಬಲರಾಜ್ವಾಡಿ, ಸಚಿನ್ ಶ್ರೀದರ್, ಐಶ್ವರ‍್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ, ಪದ್ಮನಾಭ, ರಜನಿಕಾಂತ್, ಮೈಮ್ ರಮೇಶ್, ಮುಂತಾದವರು ಅಭಿನಯಿಸಿದ್ದಾರೆ.  ಈ ಚಿತ್ರಕ್ಕೆ  ಮೈಸೂರು ಸುತ್ತಮುತ್ತ, ಚಾಮುಂಡಿ ಬೆಟ್ಟ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.  ಐಪಿಲ್ ಬೆಟ್ಟಿಂಗ್ ಬಡ್ಡಿ ಸೀನಪ್ಪನ ಬಳಿ ಸಾಲ ಮಾಡಿಕೊಂಡ ಭಾವಮೈದನನ್ನು ಉಳಿಸಲು ಜಾಮೀನುಕೊಟ್ಟು ಸಂಕಟಕ್ಕೆ ಸಿಲುಕುವ ಭಾವನ ಪಾಡು ಮೂಲ ಕಥಾವಸ್ತುವಾಗರುತ್ತದೆ.  ಜನರು ಸಾಮಾನ್ಯವಾಗಿ ಒಬ್ಬರು  ಕಷ್ಟದಲ್ಲಿರುವಾಗ ಸಹಾಯ ಮಾಡುವ ನೆಪದಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶ ಹಾಗೂ ಇಬ್ಬರ ಜಗಳದಲ್ಲಿ ಮನರಂಜನೆ ಪಡೆದುಕೊಳ್ಳುವ ಮೂರನೆಯ ವ್ಯಕ್ತಿ - ಹೀಗೆ ಸಾಗುತ್ತದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಡ್ಡಿಮಗನ್ ಲೈಫು ಚಿತ್ರಕ್ಕೆ ಯು ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.