Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೈ 1 ಗೆಟ್ 1 ಫ್ರೀ ಪೋಸ್ಟರ್ ಬಿಡುಗಡೆ
Posted date: 30 Thu, Apr 2020 – 09:44:59 AM

ಕನ್ನಡದಲ್ಲಿ ಒಂದು ಆಕರ್ಷಕ ಶೀರ್ಷಿಕೆ ‘ಬೈ 1 ಗೆಟ್ 1 ಫ್ರೀ’ ಚಿತ್ರೀಕರಣ ಮುಗಿಸಿಕೊಂಡು ಪ್ರಚಾರ ಕೆಲಸ ಶುರು ಮಾಡಬೇಕು ಅನ್ನುವಷ್ಟರಲ್ಲಿ ಕೋರೋನಾ ಆವರಿಸಿದೆ. ಆದರೆ ಈ ಚಿತ್ರದ ಪೋಸ್ಟರ್ ಅನ್ನು ಆನಂದ್ ಆಡಿಯೋ ಯು ಟ್ಯೂಬ್ ಅಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದ ಶೀರ್ಷಿಕೆ ಹೇಗೆ ಆಕರ್ಷಣೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ ಅವಳಿ ಸಹೋದರರು ಮಧು ಮಿಥುನ್ ಹಾಗೂ ಮನು ಮಿಲನ್ ಮುಖ್ಯ ಪಾತ್ರ ನಿರ್ವಹಿಸಿರುವುದು. ಜನಪ್ರಿಯ ನಟ ಕಿಶೋರ್ ಇಲ್ಲಿ ಕೇಂದ್ರ ಬಿಂದು. ರಿಷಿತ ಮಲ್ನಾಡ್, ಉಷ ಭಂಡಾರಿ, ಗೌರೀಶ್ ಅಕ್ಕಿ, ರೋಷಿಣಿ ತೆಲ್ಕರ್, ಬಲರಜವಾಡಿ ಹಾಗೂ ಇತರರು ತಾರಗಣದಲ್ಲಿದ್ದಾರೆ.
ಮೂಲತಃ ಮೈಸೂರಿನವರಾದ ಮಧು ಹಾಗೂ ಮಿಥುನ್ ಅವಳಿ ಸಹೋದರರಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡು ಅವರ ಕಿರಿ ವಯಸ್ಸಿನ ಕೆಲವು ಘಟನೆಗಳು ಈ ಚಿತ್ರದಲ್ಲಿ ಅಡಕವಾಗಿದೆ. ಅವಳಿ ಸಹೋದರರು ಏನೇನು ಅನುಭವಿಸಬೇಕಾಗುತ್ತದೆ ಎಂಬುದನ್ನೂ ಈ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮದಲ್ಲಿ ಹೇಳಲಾಗಿದೆ. ಬೆಂಗಳೂರು ಹಾಗೂ ಮುರುಡೇಶ್ವರದಲ್ಲಿ ಎಸ್ ಬಿ ಎಸ್ ಸಿ ಕ್ರಿಯೇಷನ್ಸ್ ಅಡಿಯಲ್ಲಿ ಮದುರಾಜ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹರೀಶ್ ಅನಿಲ್ಗೋಡ್ ಚಿತ್ರದಲ್ಲಿ ಅವಳಿ ?ಜವಳಿ ಮಕ್ಕಳು ಹುಟ್ಟಿದರೆ ಜರುಗುವ ಪ್ಲಸ್ ಹಾಗೂ ಮೈನಸ್ ವಿಚಾರ ಇಟ್ಟುಕೊಂಡಿದ್ದಾರೆ ಚಿತ್ರಕತೆಯಲ್ಲಿ. ಚಿತ್ರದ ನಾಲ್ಕು ಹಾಡುಗಳಿಗೆ ದಿನೇಷ್ ಕುಮಾರ್ ರಾಗ ಸಂಯೋಜನೆ ಮಾಡಿದ್ದು ವಿಜಯಪ್ರಕಾಶ್, ಅನನ್ಯ ಭಟ್, ಶರತ್ ಹಾಗೂ ಇತರರು ಹಾಡು ಹೇಳಿದ್ದಾರೆ.
ಈ ಚಿತ್ರಕ್ಕೆ ಅಭಿಷೇಕ್ ಪಾಂಡೆ ಹಾಗೂ ವಿಶ್ವಜೀತ್ ರಾವ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನವನ್ನು ಸುರೇಶ್ ಅರ್ಮೂಗಮ್ ನಿರ್ವಹಿಸಿದ್ದಾರೆ. ಮುಂದಿನ ತಿಂಗಳಲ್ಲಿ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಜುಲೈ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಇದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೈ 1 ಗೆಟ್ 1 ಫ್ರೀ ಪೋಸ್ಟರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.