Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭ್ರಮಕ ಚಿತ್ರಕ್ಕೆ ಮುಹೂರ್ತ
Posted date: 20 Wed, Dec 2017 09:54:41 AM

ಜಗ್ಗೇಶ್ ಫಿಲಂಸ್ ಲಾಂಛನದಲ್ಲಿ ಅಗಳಿ ಜಗದೀಶ್ ರವರ ನಿರ್ಮಾಣದ ಭ್ರಮಕ ಚಿತ್ರಕ್ಕೆ ನಾಗಸಂದ್ರದ, ಹೆಚ್.ಎಂ.ಟಿ. ಲೇಔಟ್, ಗಣೇಶ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಆರಂಭದಲ್ಲಿ ಲಿಚರ್ಡ್ ಲೂಯಿಸ್ ಕ್ಲಾಪ್ ಮಾಡಿದರು.  ಭಾಗ್ಯಲಕ್ಷಿಯವರು ಕ್ಯಾಮೆರಾ ಚಾಲನೆ ಮಾಡಿದರು.  ಚಿತ್ರೋದ್ಯಮದವರ ಜೊತೆ ಉಮೇಶ್ ಬಣಕಾರ್ ಬಂದು ತಂಡಕ್ಕೆ ಶುಭಕೋರಿ ಹೋದರು.  ಪ್ರಜ್ವಲ್ ಶಾಸ್ತ್ರಿ, ನಿರ್ದೇಶಿಸುತ್ತಿರುವ ಈ ಚಿತ್ರ, ಬೆಂಗಳೂರು-ಹಾಸನ  ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳೂರು ಕ್ರಾಸ್ ಸಮೀಪದ ನೆಲಗೇರು ಎಂಬ ಗ್ರಾಮದ ಬಳಿ ನಡೆಯುವ ಅಪಘಾತಗಳ ಕುರಿತು ಆಧಾರಿತವಾಗಿರುವ ಕಥೆ ಇದಾಗಿದೆ.  ಸುಜಯ್ ರಾಜ-ಛಾಯಾಗ್ರಹಣ, ಉದಿತ್ ಹರಿದಾಸ್-ಸಂಗೀತ, ಜಗದೀಶ್ ಹೂಗಾರ್ - ಚಿತ್ರಕಥೆ, ತಲೆಮನು- ನಿರ್ದೇಶನ ಸಹಾಯ ಕುಶಾಲ್ ಜೆ ರಾವ್, ಚೇತನ್ ವೆಂಕಟೇಶ, ಧನುಶ್, ಶಿವು ಏಳೂತ್, ತಾರಾಗಣದಲ್ಲಿ ಗಾಯಕಿ ಅನನ್ಯ ಭಟ್ ನಾಯಕಿಯಾಗಿ ಅಭಿನಯಿಸುತ್ತಿರುವ ಈಚಿತ್ರದಲ್ಲಿ ಕೃಷ್ಣಪ್ರಸಾದ್, ವೀಣಾ ಬಾಲಾಜಿ, ಮಹಂತೇಶ್ ಹಿರೇಮಠ್, ರೋಹಿಣಿ ನಾಗೇಶ್, ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭ್ರಮಕ ಚಿತ್ರಕ್ಕೆ ಮುಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.