Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಣಿ ದೊಡ್ಡವಳಾಗಿದ್ದಾಳೆ, ಬದಲಾಗಿಲ್ಲ (ಕಿನ್ನರಿ ಧಾರಾವಾಹಿ)
Posted date: 21 Fri, Apr 2017 08:03:35 AM

ಕಲರ್ಸ್‌ಕನ್ನಡದಕಿನ್ನರಿಧಾರಾವಾಹಿಯ ಮುದ್ದು ಮುಖದ ಮಣಿಕನ್ನಡಿಗರೆಲ್ಲರ ಮನೆಯ ಮಗಳು. ಕಿನ್ನರಿಧಾರಾವಾಹಿ ಎಂದರೆ ಮಣಿ ಎಂಬಷ್ಟು ಜನಪ್ರಿಯತೆ ಪಡೆದ ಪಾತ್ರ ಮಗುವಿನದು. ಮಣಿ ಬಾಲ್ಯದಲ್ಲಿಯೇತಾಯಿಯನ್ನು ಕಳೆದುಕೊಂಡು, ಅಪ್ಪಇದ್ದರೂಇಲ್ಲದಂತೆ ಬದುಕುತ್ತಿದ್ದು, ಮನೆಯವರೊಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಸರಳ ಜೀವಿ. ಸವಾಲುಗಳನ್ನು ಸ್ವೀಕರಿಸುತ್ತಲೇ, ಯಾರಿಗೂಕೆಟ್ಟದ್ದನ್ನು ಬಯಸದ, ಹೃದಯವಂತೆ, ಸ್ಪರದ್ರೂಪಿ ಹುಡುಗಿ ಮಣಿಕಾಲದ ನಿಯಮಕ್ಕೆ ಬದ್ಧಳಾಗಿದ್ದಾಳೆ. ಅಂದರೆಕಾಲಚಕ್ರದ ನಿಯಮದಂತೆ ನೆಟ್ಟ ಸಸಿ ಮರವಾಗಲೇಬೇಕು, ಹುಟ್ಟಿದ ಮಗು ಬೆಳೆದು ದೊಡ್ಡವಳಾಗಲೇಬೇಕು. ಹೌದು, ಕನ್ನಡಿಗರ ಮನೆ ಮನಗಳ ಗೆದ್ದ ಮುದ್ದು ಮಗು ಮಣಿ ಈಗ ದೊಡ್ಡವಳಾಗಿದ್ದಾಳೆ.

ಕಿನ್ನರಿಧಾರಾವಾಹಿಯಲ್ಲಿ ನಿರ್ವಹಿಸುತ್ತಿದ್ದ ಮಕ್ಕಳ ಪಾತ್ರಗಳೆಲ್ಲವೂ ಲೀಪ್ ಪಡೆದುಕೊಳುತ್ತಿವೆ. ವಯಸ್ಸಿನಲ್ಲಿ ಮಕ್ಕಳು ಬೆಳೆದಿದ್ದಾರೆ, ಆದರೆ ಸ್ವಭಾವದಲ್ಲಿ, ಗುಣದಲ್ಲಿ ಬದಲಾಗಿಲ್ಲ. ಧಾರಾವಾಹಿಯ ಸಮಯದಲ್ಲೂಯಾವುದೇ ಬದಲಾವಣೆಇಲ್ಲ. ಮುದ್ದು ಮುಖದ ಮಣಿಯನ್ನೇ ಹೋಲುವಂತಹ ಮುದ್ದಾದ ಹೊಸ ಮುಖ ತೆರೆಗೆ ಪರಿಚಯವಾಗುತ್ತಿದೆ. ಭೂಮಿಕಾ ಶೆಟ್ಟಿ ಮಣಿಯ ಪಾತ್ರವನ್ನು ನಿರ್ವಹಿಸುತ್ತಾಳೆ. ದೊಡ್ಡವಳಾಗಿ ಬೆಳೆದ ಮಣಿಯನ್ನುಅದ್ಧೂರಿಯಾಗಿ, ವಿಶೇಷವಾಗಿ ಪರಿಚಯಿಸಲಾಗುತ್ತದೆ. ಪ್ರೌಢಾವಸ್ಥೆಗೆ ಬಂದ ಮಣಿಯನ್ನು ಪರಿಚಯಿಸುವಕಿನ್ನರಿ ಸಂಚಿಕೆಗಳುಮುಂಬೈಯಲ್ಲಿಚಿತ್ರೀಕರಣ ಹೊಂದಿರುವುದು ವಿಶೇಷ. ಏಪ್ರಿಲ್ ೨೪ರಂದು ಸಂಜೆ ೬ ಗಂಟೆಗೆ ದೊಡ್ಡವಳಾದ ಹೊಸ ಮಣಿಯನ್ನುಕಿನ್ನರಿಧಾರಾವಾಹಿಯಲ್ಲಿ ಪರಿಚಯಿಸಲಾಗುತ್ತಿದೆ.ಬಾಲ್ಯದಿಂದಲೂ ಸವಾಲುಗಳನ್ನೇ ಸ್ವೀಕರಿಸುತ್ತ ಬರುತ್ತಿದ್ದ ಮಣಿ, ಬೆಳೆದು ದೊಡ್ಡವಳಾದ ಮೇಲೆಯಾವರೀತಿಯ ಸವಾಲುಗಳು ಎದುರಿಸಬೇಕಾಗುತ್ತದೆ?ಮುಂದೆಕತೆಯಾವತಿರುವು ಪಡೆದುಕೊಳ್ಳುತ್ತದೆ ಎಂದುಕಾದು ನೋಡಬೇಕು.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಣಿ ದೊಡ್ಡವಳಾಗಿದ್ದಾಳೆ, ಬದಲಾಗಿಲ್ಲ (ಕಿನ್ನರಿ ಧಾರಾವಾಹಿ) - Chitratara.com
Copyright 2009 chitratara.com Reproduction is forbidden unless authorized. All rights reserved.