Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಲೆ ಮಹದೇಶ್ವರ ಬೆಟ್ಟದಲ್ಲಿ ಸೆಟ್ಟೇರಿತು ಏಕ್ ಲವ್ ಯಾ
Posted date: 22 Wed, May 2019 09:06:06 AM

ನಿರ್ದೇಶಕ ಪ್ರೇಮ್ ನಿರ್ದೇಶನದ ಹೊಸ ಚಿತ್ರ ‘ಏಕ್ ಲವ್ ಯಾ. ರಕ್ಷಿತಾ ಪ್ರೇಮ್ ಅವರ ಸಹೋದರ ಅಭಿಷೇಕ್ ಈ ಚಿತ್ರದ ಮೂಲಕ ರಾಣಾ ಎಂಬ ಹೆಸರಿನೊಂದಿಗೆ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ.

ಕಳೆದ ಶನಿವಾರ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಿ ‘ಏಕ್ ಲವ್ ಯಾ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಸರಳ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕ ಪ್ರೇಮ್ ತಮ್ಮ ಭಾವಮೈದುನ ಅಭಿಷೇಕ್ ನಟನೆಯ ಮೊದಲ ದೃಶ್ಯವನ್ನು ಚಿತ್ರೀಕರಿಸಿಕೊಂಡರು. ಇದೇ ತಿಂಗಳ ಇಪ್ಪತ್ತರಿಂದ ‘ಏಕ್ ಲವ್ ಯಾ ಚಿತ್ರದ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ.  ಈ ಸಿನಿಮಾ ಆರಂಭಗೊಂದ ಶುಭ ಸಂದರ್ಭದಲ್ಲಿ ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ‘ನಿಮ್ಮ ಆಶೀರ್ವಾದ ನನ್ನ ಸಹೋದರ ಅಭಿಷೇಕ್ ಮೇಲೆ ಇರಲಿ ಎಂದು ವಿನಂತಿಸಿಕೊಂಡಿದ್ದಾರೆ.

ರಾಣಾ (ಅಭಿಷೇಕ್) ಇಂಜಿನಿಯರಿಂಗ್ ಮುಗಿಸಿ ನ್ಯೂಯಾರ್ಕ್‌ನ ಲೀ ಸ್ಟ್ರಾಸ್ಬೆರ್ಗ್ ಥಿಯೇಟರಿನಲ್ಲಿ ಅಭಿನಯ ತರಬೇತಿ ಪಡೆದು, ನಂತರ ನಿರ್ದೇಶಕ ಪ್ರೇಮ್ ಅವರ ‘ದಿ ವಿಲನ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ್ದರು.

ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗುತ್ತಿರುವ ಏಕ್ ಲವ್ ಯಾ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀನಿವಾಸ್ ಪಿ ಬಾಬು ಸಂಕಲನ ಮಾಡಲಿದ್ದಾರೆ.



Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಲೆ ಮಹದೇಶ್ವರ ಬೆಟ್ಟದಲ್ಲಿ ಸೆಟ್ಟೇರಿತು ಏಕ್ ಲವ್ ಯಾ - Chitratara.com
Copyright 2009 chitratara.com Reproduction is forbidden unless authorized. All rights reserved.