Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮುಂದಿನ ತಿಂಗಳು ಈ ಕಲರವ
Posted date: 10 Mon, Apr 2017 07:58:53 AM

ಎಂ.ಎಂ.ಜಿ. ಫಿಲಂಸ್ ಲಾಂಛನದಲ್ಲಿ ಎಂ.ಮಹಾದೇವೇಗೌಡ ನಿರ್ಮಿಸುತ್ತಿರುವ ಈಕಲರವ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಗ್ರಾಮೀಣ ಸೊಗಡಿನ ನೈಜ ಕಥೆ ಹೊಂದಿರುವ ಹಾಸ್ಯದೊಂದಿಗೆ, ಪ್ರೀತಿ-ಪ್ರೇಮದ ಎಳೆಯ ಈ ಚಿತ್ರವನ್ನು ಮುಂದಿನ ತಿಂಗಳ ಮೊದಲವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಸಂದೀಪ್ ದಕ್ಷ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೀಟರ್ ಎಂ ಜೋಸೆಫ್ ಸಂಗೀತ, ಕುಮಾರ್ ಜಿ ಛಾಯಾಗ್ರಹಣ, ಧನುಕುಮಾರ್ ನೃತ್ಯ ನಿರ್ದೇಶನ, ಪ್ರಕಾಶ್ ಬಾಬು ಸಾಹಿತ್ಯ, ರವಿಚಂದ್ರನ್ ಸಂಕಲನ, ಸುಬ್ಬು, ಅಶೋಕ್ ಸಾಹಸವಿದೆ. ನವೀನ್ ಕೃಷ್ಣ, ರೋಹಿಣಿ ಭಾರದ್ವಾಜ್, ಲಕ್ಕಿ, ರಶ್ಮಿ, ನಿಹಾರಿಕಾ, ಮೈಸೂರು ಶೋಭಾ, ಪದ್ದು, ಸಂತೋಷ್, ಪ್ರಿಯಾ, ಮಹದೇವೆಗೌಡ ಮುಂತಾದವರ ತಾರಾಬಳಗವಿದೆ.
ಇದೇ ತಿಂಗಳು ಬಣ್ಣಬಣ್ಣದ ಬದುಕು

ಶ್ರೀ. ಮುತ್ತುರಾಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಕಾರ್ಕಳ ಕೃಷ್ಣನಾಯ್ಕ, ಮಾ| ಗೌತಮ್, ಮಾ:ಗಗನ್ ನಿರ್ಮಿಸುತ್ತಿರುವ ಬಣ್ಣಬಣ್ಣದ ಬದುಕು ಚಿತ್ರಕ್ಕೆ ಬಣ್ಣದ ಬದುಕನ್ನು ನಂಬಿದ ಕರಾವಳಿ ಕರ್ನಾಟಕ ಒಬ್ಬ ಬಡ ಯಕ್ಷಗಾನ ಕಲಾವಿದನ ಸುತ್ತ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಇದೇ ತಿಂಗಳು ರಾಜ್ಯಾಂದ್ಯಾಂತ ಬಿಡುಗಡೆಯಾಗಲಿದೆ.

ಪತ್ರಕರ್ತ ಇಸ್ಮಾಯಿಲ್ ಮೂಡಶದ್ದೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿಜಯ್ ಎಸ್ ಛಾಯಾಗ್ರಹನ, ಎ.ಕೆ. ವಿಜಯ್ ಕೋಕಿಲ ಸಂಗೀತ, ಶಶಿರಾಜ್ ಕಾವುರ್, ಸುರೇಶ್ ಆರ್ ಎಸ್ ಸಾಹಿತ್ಯ, ನಾಗೇಂದ್ರ ಅರಸ್ ಸಂಕಲನ, ಅನುಷ ಹೆಗ್ಡೆ ನೃತ್ಯ ನಿರ್ದೆಶನವಿದೆ. ರವಿರಾಜ್ ಶೆಟ್ಟಿ, ಅನ್ವಿತಾ ಸಾಗರ್, ರಿಯಾ ಮೇಘನಾ, ಸತ್ಯಜಿತ್, ರಮೇಶ್ ಭಟ್, ಅಪೂರ್ವ, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್, ಚೇತನ್ ರೈ, ಮಾಣಿ, ರಮೇಶ್ ರೈ, ನವೀನ್ ಬಂದಾಲ್ ಇನ್ನು ಮುಂತಾದವರ ತಾರಾಬಳಗವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮುಂದಿನ ತಿಂಗಳು ಈ ಕಲರವ - Chitratara.com
Copyright 2009 chitratara.com Reproduction is forbidden unless authorized. All rights reserved.