Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೈಸೂರಿನಲ್ಲಿ ಅದ್ದೂರಿಯಾಗಿ ನೆರೆವೇರಿದ ಸಿಹಿರ್ ಚಿತ್ರದ ಆಡಿಯೋ ರಿಲೀಸ್
Posted date: 24 Fri, Nov 2017 08:12:59 AM
ಬ್ರಿತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅರುಣ್ ಬಿ.ಎಂ ಗೌಡ ಅವರು ನಿರ್ಮಿಸಿರುವ ‘ಸಿಹಿರ್  ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಮೈಸೂರಿನ ಖಾಸಗಿ ಹೋಟಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಹಾಡುಗಳ ಬಿಡುಗಡೆಯನ್ನು ವಿಭಿನ್ನವಾಗಿ ಮಾಡಬೇಕು ಅಂದುಕೊಂಡಿದ್ದ ಚಿತ್ರತಂಡ ಅಂಧರ ಕೈಯಲ್ಲಿ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿಸಿದರು. ಇದೇ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ನೇತ್ರದಾನದ ಅರ್ಜಿಗೆ ಸಹಿ ಮಾಡಿದರು. ಕಲಾವಿದರಾದ ಕಿಣಿ ವಿನೋದ್, ನಿರಂಜನ್ ದೇಶಪಾಂಡೆ, ನೇಹ, ನಿರ್ದೇಶಕ ವಿ.ಮೋ.ಮಿಥುನ್, ನಿರ್ಮಾಪಕ ಅರುಣ್ ಬಿ.ಎಂ.ಗೌಡ ಹಾಗೂ ಸಂಗೀತ ನಿರ್ದೇಶಕರಾದ ಚೈತ್ರ ಮುಂತಾದವರು ಈ ಸುಂದರ ಸಮಾರಂಭದಲ್ಲಿ ಭಾಗವಹಿಸಿದ್ದರು. ಆನಂದ್ ಆಡಿಯೋದವರು ಈ ಚಿತ್ರದ ಆಡಿಯೋ ಸೀಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
   ಚೈತ್ರ ಹೆಚ್.ಜಿ ಅವರು ಸಂಗೀತ ನೀಡಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಕೀರ್ತಿ ಶ್ರೀನಿವಾಸ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. 
    ವಿ.ಮೋ.ಮಿಥುನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸತ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ ಅವರ ಸಂಕಲನವಿದೆ. 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈಸೂರಿನಲ್ಲಿ ಅದ್ದೂರಿಯಾಗಿ ನೆರೆವೇರಿದ ಸಿಹಿರ್ ಚಿತ್ರದ ಆಡಿಯೋ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.