Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೈಸೂರಿನಲ್ಲಿ ಬೆಂಕಿಯ ಬಲೆ ಚಿತ್ರಕ್ಕೆ ಚಾಲನೆ
Posted date: 17 Wed, May 2017 08:41:58 AM

 ಶಿವಾಜಿ ಪಿಕ್ಚರ್ಸ್ ಲಾಂಛನದಲ್ಲಿ ಶಿವಾಜಿ ಅವರು ನಿರ್ಮಿಸುತ್ತಿರುವ ‘ಬೆಂಕಿಯ ಬಲೆ’ ಚಿತ್ರದ ಮುಹೂರ್ತ ಸಮಾರಂಭ ಮೈಸೂರಿನ ಬಂದಂತಮ್ಮ ದೇವಿ ದೇವಸ್ಥಾನದಲ್ಲಿ ನೆರವೇರಿದೆ.

‘ದೇವರೆ ಎಲ್ಲರಿಗೂ ಒಳ್ಳೆಯದಾಗಲಿ. ನನ್ನ ಕಷ್ಟ - ಕಾರ್ಪಣ್ಯಗಳೆಲ್ಲ ದೂರವಾಗಿ ಸಂತೋಷದಿಂದಿರುವಂತೆ ಅನುಗ್ರಹಿಸು ತಾಯೆ’ ಎಂದು ನಾಯಕಿ ದೇವರನ್ನು ಪ್ರಾರ್ಥಿಸುವ ಪ್ರಥಮ ಸನ್ನಿವೇಶಕ್ಕೆ ಜೆ.ಡಿ.ಎಸ್ ಮುಖಂಡರಾದ ಹರೀಶ್ ಗೌಡ್ರು ಆರಂಭ ಫಲಕ ತೋರಿದರು. ಬಿಜೆಪಿ ಮುಖಂಡರಾದ ಮಾರುತಿರಾವ್ ಪವಾರ್ ಕ್ಯಾಮೆರಾ ಚಾಲನೆ ಮಾಡಿದರು. ಅಬ್ದುಲ್ ಖಾದರ್ ಶಾಯಿದ್, ಕೆ.ಸಿ.ಶಿವಾನಂದ್ ಕೂಡ್ಲಾಪುರ, ರಮಣಿ, ಜಿ.ಪಿ.ಪ್ರಕಾಶ್, ಜೂಮ್ ರವಿ, ಬಿಡದಿ ನಾಗೇಶ್, ಜಿಬಿಎಸ್ ಸಿದ್ದೇಗೌಡ್ರು(ತರ‍್ಲೆ ವಿಲೇಜ್ ನಿರ್ದೇಶಕ, ನಿರ್ಮಾಪಕ) ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಶಿವಾಜಿ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿರುವ ಈ ಚಿತ್ರಕ್ಕೆ ಪುರಂದರ್ ಸಂಗೀತ ನಿರ್ದೇಶನ ಹಾಗೂ ರಾಮು ಅವರ ಛಾಯಾಗ್ರಹಣವಿದೆ. ಶಿವಾಜಿ, ಪ್ರೀತಿ, ಶ್ವೇತಾ, ಅಂಕಿತಾ, ನಿರಂಜನ್, ಗೌತಮ್, ಲೋಕೇಶ್ ರಾವ್, ವಾಸುದೇವ ಮೂರ್ತಿ, ಅಗ್ನಿ ರವಿ, ನಾಗರತ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈಸೂರಿನಲ್ಲಿ ಬೆಂಕಿಯ ಬಲೆ ಚಿತ್ರಕ್ಕೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.