Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯದಾ ಯದಾ ಹಿ ಧರ್ಮಸ್ಯ ಇದೆ ಶುಕ್ರವಾರ
Posted date: 28 Thu, Mar 2019 08:47:08 AM

ಇದೆ ಮಾರ್ಚ್ ೨೯ ರಂದು ಅಕ್ಷರ ಪ್ರೊಡಕ್ಷನ್ ಅಕ್ಷರ್ ತಿವಾರಿ ನಿರ್ಮಾಣದ ಯದಾ ಯದಾ ಹಿ ಧರ್ಮಸ್ಯ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯ ರಾಘವೇಂದ್ರ, ಸಾಯಿ ಕುಮಾರ್, ಶ್ರಾವ್ಯ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ಈ ಮಲ್ಟಿ ಸ್ಟಾರ್ ಸಿನಿಮಾ ವಿರಾಜ್ ಅವರ ಪ್ರಥಮ ನಿರ್ದೇಶನದಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ವಿರಾಜ್ ಅವರದೇ.
ಇದು ಧರ್ಮ ಹಾಗೂ ಅಧರ್ಮ ನಡುವಿನ ಸಿನಿಮಾ. ಕಥಾ ನಾಯಕ ವಿಜಯ ರಾಘವೇಂದ್ರ ದುಡ್ಡೇ ದೊಡ್ಡಪ್ಪ ಎಂದು ನಂಬಿರುವವನು. ಇವನು ಒಂದು ದೊಡ್ಡ ತಂಡದ ಜೊತೆ ಸೇರಿಕೊಂಡು ಹಲವಾರು ಚಟುವಟಿಕೆಗಳಲ್ಲಿ ಭಾಗಿ ಆಗುತ್ತಾನೆ. ಆರು ಸಾಹಸ ದೃಶ್ಯಗಳಿವೆ ಹಾಗೂ ಐದು ಹಾಡುಗಳಿರುವ ಚಿತ್ರ ಇದು.

ಜೂಡ ಸ್ಯಾಂಡಿ ಸಂಗೀತ, ಶಂಕರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಮಾಸ್ ಮಾದ, ವಿನೋದ್, ವಿಜಯ್ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಮಾಡಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯದಾ ಯದಾ ಹಿ ಧರ್ಮಸ್ಯ ಇದೆ ಶುಕ್ರವಾರ - Chitratara.com
Copyright 2009 chitratara.com Reproduction is forbidden unless authorized. All rights reserved.