Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯಾರ್ ಯಾರೋ ಗೋರಿಮೇಲೆ ಯಾರ್ ಯಾರೋ ಹೆಸರು?
Posted date: 17 Wed, May 2017 08:37:21 AM

ಮಾತೃಕೃಷಾ ಕಮುನಿಕೇಶನ್ ಲಾಂಛನದಲ್ಲಿ ಪಟ್ಟರಾಜ್ ನಿರ್ಮಿಸುತ್ತಿರುವ ಯಾರ್ ಯಾರೋ ಗೋರಿಮೇಲೆ ಚಿತ್ರಕ್ಕೆ ತಾನು ಒಂದು ಬಗೆದರೆ ಮಾನವ ಬೇರೊಂದು ಬಗೆವುದು ದೈವ ಎಂಬಂತೆ ನಾಯಕ ಅಂದುಕೊಂಡದ್ದು ಯಾವುದು ನಡೆಯಲ್ಲ ತಾನು ಪ್ರೀತಿಸುವ ಹುಡುಗಿ ತನಗು ಸಿಗಲ್ಲ ಬೇರೆಯಾರ ಕೈಗೂ ಸಿಗಲ್ಲ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಹುಟ್ಟಿಸುವ ಚಿತ್ರವನ್ನು ಕುಂಭರಾಶಿ, ಸೂರಿಗ್ಯಾಂಗ್, ಒನ್‌ಡೇ ಚಿತ್ರಗಳಿಗೆ ಕೆಲಸ ಮಾಡಿರುವ ರಘು ಚಾಂದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಲವ್ ಕಮ್ ಹಾರರ್ ಕಥೆ ಹೊಂದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ಹಾಡುಗಳ ದ್ವನಿಸುರುಳಿ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕೆ ಪ್ರದೀಪ್ ಗಾಂಧಿ ಛಾಯಾಗ್ರಹಣ, ಲೋಕಿ ಸಂಗೀತ, ವಿನಯ್ ಕುಮಾರ್ ಕೂರ್ಗ್ ಸಂಕಲನ, ರಘು, ಪಂಪಾಪತಿ, ಲೋಕಿ ಸಾಹಿತ್ಯ, ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ, ಜೋನ್ಸ್ ಸಾಹಸ, ವಿನು ಮನಸ್ಸು ಹಿನ್ನೆಲೆ ಸಂಗೀತವಿದೆ. ಅಭಿ, ರಾಜ್, ವರ್ಷ, ಗೋಪಾಲ್, ಮಾರುತಿ, ತಿಪ್ಪೇಶ್, ಹೇಮಾವತಿ, ವರುಣ್, ದತ್ತಾತ್ರೇಯ ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯಾರ್ ಯಾರೋ ಗೋರಿಮೇಲೆ ಯಾರ್ ಯಾರೋ ಹೆಸರು? - Chitratara.com
Copyright 2009 chitratara.com Reproduction is forbidden unless authorized. All rights reserved.