Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜ್ ವಿಷ್ಣು ನಾಳೆಯಿಂದ ತೆರೆಗೆ
Posted date: 03 Thu, Aug 2017 05:21:30 PM
ಶ್ರೀಮಂತಿಕೆಯಿಂದ ಕೂಡಿದ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿರುವ ರಾಮು ಅವರು ತಮ್ಮ ರಾಮು ಫಿಲಂಸ್ ಸಂಸ್ಥೆಯಡಿ ನಿರ್ಮಿಸಿರುವ ೩೭ನೇ ಚಿತ್ರ ‘ರಾಜ್‌ವಿಷ್ಣು’. ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿರುವ ‘ರಾಜ್ ವಿಷ್ಣು ಚಿತ್ರ ಅದ್ದೂರಿಯಾಗಿ ನಿರ್ಮಾಣಗೊಂಡಿದೆ. ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ ‘ರಜನಿ ಮುರುಘ’ ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ‘ರಾಜ್ ವಿಷ್ಣು’ ಸಿನಿಮಾವನ್ನು ರೂಪಿಸಲಾಗಿದ್ದು ನಾಳೆಯಿಂದ  ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ. 
 
ಈ ಹಿಂದೆ ‘ಅಧ್ಯಕ್ಷ’ ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು ‘ರಜನಿ ಮುರುಘ’ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳಲಾಗಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ ‘ರಾಜ್ ವಿಷ್ಣು’ ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ. ಕೆ.ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಜೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು, ವಿನೋದ್ ಅವರ ಸಾಹಸ ಸಂಯೋಜನೆ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ, ಜನಾರ್ಧನ ಮಹರ್ಷಿ ಚಿತ್ರಕತೆ, ಸುರೇಶ್ ಗೋಸ್ವಾಮಿ ಸಹ ನಿರ್ದೇಶನ, ಅನಿಲ್ ಕುಮಾರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಶರಣ್ ಮತ್ತು ಚಿಕ್ಕಣ್ಣ ಪ್ರಮುಖವಾಗಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರಮೇಶ್ ಪಂಡಿತ್, ಭಜರಂಗಿ ಲೋಕಿ, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ. ಮುಂಬೈ ಮೂಲದ ವೈಭವಿ ‘ರಾಜ್ ವಿಷ್ಣು’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಖ್ಯಾತ ನಟ ಶ್ರೀಮುರುಳಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ವಾರ ರಾಜ್-ವಿಷ್ಣು ತೆರೆಮೇಲೆ ಬರುತ್ತಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜ್ ವಿಷ್ಣು ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.