Chief Editor
Manohar. R (Manu)
Photo Journalist
chitrataramanu@gmail.com
+91 9845549026
ಲಂಡನ್ ಪರದೇಸಿಗೆ ಮೊದಲ ಹಂತ ಮುಕ್ತಾಯ
Posted date: 22 Thu, Mar 2018 08:08:51 AM
ಈ ಹಿಂದೆ ಈ ಸಂಭಾಷಣೆ  ರಾಜಾ ಲವ್ಸ್ ರಾಧೆ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಎಂ. ರಾಜಶೇಖರ್ ನಿರ್ದೇಶನದ ಮೂರನೇ ಚಿತ್ರ ಪರದೇಸಿ ಕೇರಾಫ್ ಲಂಡನ್ ನ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಗಡಿನಾಡು, ಬಳ್ಳಾರಿ, ಸಿರಿಗುಪ್ಪ ಸುತ್ತಮುತ್ತ  ಚಿತ್ರೀಕರಣ ನಡೆಸಲಾಗಿದೆ. ಲಂಡನ್ ನಿಂದ ಇಂಡಿಯಾಗೆ ಬರುವ  ನಾಯಕ ಎದುರಿಸುವ ಸಂದರ್ಭಗಳ ಕಥೆಯನ್ನೊಳಗೊಂಡಿದೆ. ಸಿರಿಗುಪ್ಪದ ಮುರಾರಿ ರೈಸ್ ಮಿಲ್ ಆವರಣದಲ್ಲಿ ನಾಯಕ ವಿಜಯ ರಾಘವೇಂದ್ರ, ಶೋಭರಾಜ್, ಡ್ಯಾನಿಯಲ್ ಪುಟ್ಟಪ್ಪ, ಪೆಟ್ರೋಲ್ ಪ್ರಸನ್ನ ಪ್ರಶಾಂತ್ ಸಿದ್ದಿ ಅಭಿನಯದಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವುದರೊಂದಿಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. 
ಚಿತ್ರಕ್ಕೆ ಚಿದಾನಂದ್ ಹೆಚ್.ಕೆ. ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ವಿಜಯ್ ಭರಮ ಸಾಗರ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ, ಕಲೈ ಮಾಸ್ಟರ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸವಿದೆ. ವಿಜಯ ರಾಘವೇಂದ್ರ, ರಾಶಿ, ಪೂಜಾ, ಸುಚೀಂದ್ರ ಪ್ರಸಾದ್, ಭಾಸ್ಕರ್, ತಬಲಾ ನಾಣೆ, ಕುರಿ ಪ್ರತಾಪ್, ಪ್ರಶಾಂತ್ ಸಿದ್ದಿ, ಶೋಭರಾಜ್, ಮೋಹನ್ ಜುನೇಜಾ, ಡ್ಯಾನಿ ಕುಟ್ಟಪ್ಪ, ಪೆಟ್ರೋಲ್ ಪ್ರಸನ್ನ, ಕುರಿ ಸುನಿಲ್, ನಿರಂಜನ್ ಮುಂತಾದವರ ತಾರಾಬಳಗವಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಲಂಡನ್ ಪರದೇಸಿಗೆ ಮೊದಲ ಹಂತ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.