ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್ನ(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ. ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ. ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ. ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್ ಕೇವಲ ೧೯ ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ.
ಜೀ಼ ಕನ್ನಡ ವಾಹಿನಿಯ ಖ್ಯಾತ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ