Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 41ನೇ ವಾರ್ಷಿಕೋತ್ಸವ, 17ನೇ ವಾರ್ಷಿಕ ಪ್ರಶಸ್ತಿಳ ವಿವರ
Posted date: 09 Tue, Jan 2018 01:36:22 PM
 ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಾ, ಚಿತ್ರರಂಗದ ಏಳಿಗೆಗೆ ತಮ್ಮದೇ ಕೊಡುಗೆ ನೀಡಿರುವವರು ದಿವಂಗತ ಡಿ.ವಿ ಸುಧೀಂದ್ರ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದ ಸುಧೀಂದ್ರ ಅವರು ತಮ್ಮ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ನಮ್ಮ ಸಂಸ್ಥೆಯ ಮೂಲಕ ಮೊದಲಿಗೆ ಈ ಪರಿಪಾಠ ಆರಂಭವಾಗಿದ್ದು ಕೇವಲ ಎರಡು ಪ್ರಶಸ್ತಿಗಳ ಮೂಲಕ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭವೀಗ ೧೧ ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಪತ್ರಕರ್ತರು ಕೂಡಾ ಈ ಸಮಾರಂಭಕ್ಕೆ ಜೊತೆಯಾಗಿ ಅರ್ಥವಂತಿಕೆ ಹೆಚ್ಚಿಸಿದ್ದಾರೆ.
ಈ ಬಾರಿ 2018ರ ಜನವರಿ 25ರ ಗುರುವಾರ ಸಂಜೆ 5.30ಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಮ್ಮ ರಾಘವೇಂದ್ರ ಚಿತ್ರವಾಣಿ 41ನೇ ವಾರ್ಷಿಕೋತ್ಸವ ಮತ್ತು 17ನೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಈ ಸಮಾರಂಭದ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. 


ಪತ್ರಿಕಾ ಪ್ರಚಾರಕರ್ತ      

2017ರ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಶ್ರೀ ಕೆ.ಸಿ.ಎನ್ ವೇಣುಗೋಪಾಲ್ ಹಿರಿಯ ಚಲನಚಿತ್ರ ನಿರ್ಮಾಪಕರು 
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಶ್ರೀ ಕೃಷ್ಣರಾವ್ ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಶ್ರೀಮತಿ ನಂದಿತ ಖ್ಯಾತ ಹಿನ್ನಲೆಗಾಯಕರು
(‘ಡಾ:ರಾಜ್‌ಕುಮಾರ್ ಪ್ರಶಸ್ತಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ)

ಶ್ರೀಎಸ್.ನಾರಾಯಣ್ ನಿರ್ದೇಶಕರು
(‘ಯಜಮಾನ ಚಿತ್ರದ ಖ್ಯಾತಿ ‘ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ)

ಶ್ರೀಮತಿ ಸುಂದರಶ್ರೀ ಕಲಾವಿದರು
(ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ) 

ಶ್ರೀ ಬಾಪು ಪದ್ಮನಾಭ ಅತ್ಯತ್ತಮ ಸಂಗೀತ ನಿರ್ದೇಶನ ‘ಅಲ್ಲಮ್ಮಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ.ಲಿ ಪ್ರಶಸ್ತಿ)

ಶ್ರೀ ಸಂತೋಷ್ ಆನಂದರಾಮ್ ಅತ್ಯುತ್ತಮ ಕಥಾಲೇಖಕರು ‘ರಾಜಕುಮಾರ ಚಿತ್ರ
      (‘ಖ್ಯಾತ ನಿರ್ದೇಶಕ, ನಿರ್ಮಾಪಕ ಶ್ರೀಕೆ.ವಿ.ಜಯರಾಂ ಪ್ರಶಸ್ತಿ ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ)

ಶ್ರೀ ರಾಜೇಶ್ ಬಿ ಶೆಟ್ಟಿ ಅತ್ಯುತ್ತಮ ಸಂಭಾಷಣೆ ‘ಒಂದು ಮೊಟ್ಟೆಯ ಕಥೆ ಚಿತ್ರಕ್ಕಾಗಿ
(‘ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಡಾ:ಎಚ್.ಕೆ.ನರಹರಿ ಅವರಿಂದ)

ಶ್ರೀ ನರ್ತನ್ ‘ಮಫ಼್ತಿ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಜ಼್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಶ್ರೀಬಿ.ಸುರೇಶ್ ಪ್ರಶಸ್ತಿ)

ಶ್ರೀ ವಿ.ನಾಗೇಂದ್ರಪ್ರಸಾದ್ ‘ಚೌಕ ಚಿತ್ರದ (ಅಪ್ಪ ಐ ಲವ್ ಯು ಅಪ್ಪ) ಗೀತರಚನೆಗಾಗಿ
(‘ಹಿರಿಯ ಪತ್ರಕರ್ತರಾದ ಶ್ರೀಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )

ಶ್ರೀ ಮನದೀಪರಾಯ್ ಹಿರಿಯ ಕಲಾವಿದರು
(‘ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ ನಟ ಶ್ರೀ ಸುದೀಪ್ ಅವರಿಂದ)






 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 41ನೇ ವಾರ್ಷಿಕೋತ್ಸವ, 17ನೇ ವಾರ್ಷಿಕ ಪ್ರಶಸ್ತಿಳ ವಿವರ - Chitratara.com
Copyright 2009 chitratara.com Reproduction is forbidden unless authorized. All rights reserved.