Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ದಿಲ್ಲದೆ ಸಿದ್ಧವಾದ ದಾಮಾಯಣ
Posted date: 23 Sat, Mar 2019 08:54:23 AM

ಹೊಸತನದ ಚಿತ್ರಗಳಿಗೆ ಹೆಸರು ಮಾಡುತ್ತಿರುವ ಮಂಗಳೂರಿನಿಂದ ಇದೀಗ ಮತ್ತೊಂದು ಕನ್ನಡ ಚಲನಚಿತ್ರ ತೆರೆಏರಲು ಸಿದ್ದವಾಗಿದೆ. ಈ ಚಿತ್ರಕ್ಕೆ ದಾಮಾಯಣ ಎಂದು ನಾಮಕರಣ ಮಾಡಲಾಗಿದೆ.

ಇಪ್ಪತ್ತೈದು ವರ್ಷದ ಯುವ ನಿರ್ದೇಶಕ, ಬುಟ್ಟಿಸ್ಟೋರ್.ಕಾಮ್ ನ ನಿರ್ಮಾತೃ ಶ್ರೀಮುಖ -ತನ್ನ ಕನಸಿನ ವಿಶೇಷ ಕಥೆಯೊಂದನ್ನು ಜನರಿಗೆ ತಿಳಿಸಲು ಬಯಸಿದ್ದರು.ಮಿತ್ರರಾದ ಸಂಗೀತ ನಿರ್ದೇಶಕ ಕೀರ್ತನ್ ಬಾಳಿಲ ಹಾಗೂ ಕಾರ್ಯಕಾರಿ ನಿರ್ಮಾಪಕ ಅಕ್ಷಯ್ ರೇವಣ್ಕರ್‌ರಿಗೆ ಕಥೆಯನ್ನು ನಿರೂಪಿಸಿದರು. ಕಥೆಯನ್ನು ಬಹಳವಾಗಿ ಇಷ್ಟಪಟ್ಟ ಇಬ್ಬರೂ ಚಿತ್ರವನ್ನು ಬೆಳ್ಳಿ ತೆರೆಗೆತರಲು ಉತ್ತೇಜನ ನೀಡಿದರು.
ದಕ್ಷಿಣ ಕನ್ನಡದ ಭಾಷಾ ಸೊಗಡಿನ ಈ ಚಲನಚಿತ್ರ ಹೊಸತೊಂದು ಕಥೆಯನ್ನು ಹೊಂದಿದೆ. ಮಂಗಳೂರು ಮೂಲದ ಪ್ರಶಸ್ತಿ ವಿಜೇತ ಉದ್ಯಮಿ ಶ್ರೀಮುಖ ಈ ಚಿತ್ರದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ತನಗೆ ಬಿದ್ದ ಕನಸೊಂದನ್ನು ಕಥೆಯಾಗಿಸಿದ್ದಾರೆ. ಚಿತ್ರವು ಮೂರ್ಖನೊಬ್ಬನ ಬಯಕೆ ಹಾಗೂ ವಾಸ್ತವದ ನಡುವೆ ಸಾಗುತ್ತದೆ. ಒಟ್ಟು 112 ನಿಮಿಷಗಳ ಈ ಚಿತ್ರವು ಐದು ಸಾಂದರ್ಭಿಕ ಹಾಡುಗಳನ್ನು ಹೊಂದಿದೆ.

ದಾಮಾಯಣದ ಚಿತ್ರೀಕರಣವು ಮಂಗಳೂರಿನ ಸುತ್ತಮುತ್ತಲಿನ ಪರಿಸರದಲ್ಲಿ ನಡೆದಿದ್ದು, ಸದ್ಯ ಚಲನಚಿತ್ರದ ಕೊನೆಯ ಹಂತದ ನಿರ್ಮಾಣಕಾರ್ಯ ನಡೆಯುತ್ತಿದೆ. ಸೆವೆಂಟಿ ಸೆವೆನ್ ಸ್ಟುಡಿಯೋಸ್ನ ರಾಘವೇಂದ್ರಕುಡ್ವ ಚಿತ್ರದ ನಿರ್ಮಾಪಕರಾಗಿದ್ದಾರೆ. ಸಿದ್ದು ಜಿ. ಎಸ್. ಮತ್ತು ಕಾರ್ತಿಕ್ ಕೆ. ಎಮ್. ದಾಮಾಯಣದ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ಮಾಡಿದ್ದಾರೆ.

ದಾಮಾಯಣದ ಮೊದಲ ಪೋಸ್ಟರನ್ನು ಒಬ್ಬ ವಿಶೇಷ ವ್ಯಕ್ತಿಯು ಒಂದು ವಿಶೇಷ ದಿನದಂದು ಬಿಡುಗಡೆ ಮಾಡಲಿದ್ದಾರೆ. ಎಂದು ಶ್ರೀಮುಖ ತಿಳಿಸಿದ್ದಾರೆ. ಎಲ್ಲವೂ ಸಾಂಗವಾಗಿ ನಡೆದಲ್ಲಿ ಬರುವ ಅಗಸ್ಟ್ ತಿಂಗಳಿನಲ್ಲಿ ಚಲನಚಿತ್ರದ ಬಿಡುಗಡೆಯನ್ನು ಕರ್ನಾಟಕದಾದ್ಯಂತ ನಿರೀಕ್ಷಿಸಬಹುದಾಗಿದೆ. ದಾಮಾಯಣವು ಉತ್ತಮವಾಗಿ ತಯಾರಾದ ವಾಸ್ತವಿಕ ನಿರೂಪಣೆಯಾಗಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ದಿಲ್ಲದೆ ಸಿದ್ಧವಾದ ದಾಮಾಯಣ - Chitratara.com
Copyright 2009 chitratara.com Reproduction is forbidden unless authorized. All rights reserved.