Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ `ಮತ್ತೆ ಉದ್ಭವ` ಚಿತ್ರ ತೆರೆಗೆ
Posted date: 31 Tue, Dec 2019 – 08:56:32 PM

ವೈಟ್ ಪ್ಯಾಂಥರ‍್ಸ್ ಕ್ರಿಯೇಟರ್ಸ್ ಸಂಸ್ಥೆಯವರು ನಿರ್ಮಿಸಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ವಿ.ಮನೋಹರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮೋಹನ್ ಅವರ ಛಾಯಾಗ್ರಹಣವಿದೆ. ಎಸ್.ಮೋಹನ್ ಸಂಭಾಷಣೆ ಬರೆದಿದ್ದಾರೆ. ವಸಂತ್‌ರಾವ್ ಕುಲಕರ್ಣಿ ಕಲಾನಿರ್ದೇಶನ ಹಾಗೂ ಅಪೇಕ್ಷ ಪುರೋಹಿತ್ ಅವರ ವಸ್ತ್ರ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಗುರುಪ್ರಸಾದ್ ಮುದ್ರಾಡಿ.
‘ಪ್ರಿಮಿಯರ್ ಪದ್ಮಿನಿ‘ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಿಲನ ನಾಗರಾಜ್. ಅವಿನಾಶ್, ರಂಗಾಯಣ ರಘು, ಮೋಹನ್, ಸುಧಾ ಬೆಳವಾಡಿ, ಶುಭ ರಕ್ಷ, ಮಂಡ್ಯ ರವಿ, ಪಿ.ಡಿ.ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ `ಮತ್ತೆ ಉದ್ಭವ` ಚಿತ್ರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.