Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ ಮಿಸ್ಟರ್ ಎಲ್‌ಎಲ್‌ಬಿ ಪ್ರಥಮ ಪ್ರತಿ
Posted date: 08 Tue, Aug 2017 10:08:56 AM
ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮಿಸ್ಟರ್ ಎಲ್‌ಎಲ್‌ಬಿ ಚಿತ್ರವು ಇದೀಗ ಬಿಡುಗಡೆಗೆ ಸಿದ್ದವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಡಬ್ಬಿಂಗ್ ರೀ ರೇಕಾರ್ಡಿಂಗ್ ಕಾರ್ಯ ಮುಗಿದಿದ್ದು, ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಹೊರಬರಲಿದೆ. ಪ್ರೀತಿ, ಪ್ರೇಮ, ಹಾಸ್ಯದ ಕಥಾನಕ ಹೊಂದಿರುವ ಈ ಚಿತ್ರಕ್ಕೆ ರಘುವರ್ಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಈ ಹಿಂದೆ ತಿಮ್ಮರಾಯ, ಗುಣವಂತ, ಬದ್ರಿ ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ದನ್ ೧೦ ವರ್ಷಗಳ ನಂತರ ಪುನಃ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. 
 
ಹಳ್ಳಿ ಸೊಗಡಿನಲ್ಲಿ ನಡೆಯುವ ಈ ಕಥಾಹಂದರದಲ್ಲಿ ನಾಯಕನಿಂದ ಹಳ್ಳಿಯ ಜನರಿಗೆ ತೊಂದರೆ ಉಂಟಾದಾಗ ಅದು ನೋಡುಗರ ಕಣ್ಣಿಗೆ ಕಾಮಿಡಿ ರೂಪದಲ್ಲಿ ಕಾಣಿಸುತ್ತದೆ. ಅಂತ್ಯದಲ್ಲಿ ಅದರ ಪರಿಣಾಮ ಏನಾಗುತ್ತದೆ ಎಂಬುದೇ ಮಿಸ್ಟರ್ ಎಲ್‌ಎಲ್‌ಬಿ ಚಿತ್ರದ ಕಥಾಹಂದರ. 
 
ಚಿತ್ರಕ್ಕೆ ಸುರೇಶ್‌ಬಾಬು ಛಾಯಾಗ್ರಹಣ,  ಮಂಜುಚರಣ್ ಸಂಗೀತ, ರಾಜು ಬೆಳಗೆರೆ ಸಂಭಾಷಣೆ, ಕೆ.ಗಿರೀಶ್ ಕುಮಾರ್ ಸಂಕಲನ, ಗೌಸ್‌ಫೀರ್, ಮಂಜುಚರಣ್ ಸಾಹಿತ್ಯ, ತ್ರಿಭುವನ್,  ಕಲೈ ಮಾಸ್ಟರ್ ನೃತ್ಯ ನಿರ್ದೇಶನ, ಪ್ರಭು ಕಲಾನಿರ್ದೇಶನವಿದೆ. ಶಿಶಿರ, ಲೇಖಚಂದ್ರ, ಸುಜಯ್ ಹೆಗ್ಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡ್ರು, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತಾ ಆಚಾರ್ಯ, ನಾರಾಯಣಸ್ವಾಮಿ, ಡೈಮಂಡ್ ರಾಜಣ್ಣ, ಡಾ|| ಸೋಮಶೇಖರ್, ರಾಮಣ್ಣ ಮುಂತಾದವರ ತಾರಾಬಳಗವಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ಮಿಸ್ಟರ್ ಎಲ್‌ಎಲ್‌ಬಿ ಪ್ರಥಮ ಪ್ರತಿ - Chitratara.com
Copyright 2009 chitratara.com Reproduction is forbidden unless authorized. All rights reserved.