Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ ಹೋಂ ಮಿನಿಸ್ಟರ್ ಬರುತ್ತಿದ್ದಾರೆ...
Posted date: 13 Sat, Jun 2020 – 11:11:34 AM

ಶ್ರೇಯಸ್ಸ್ ಚಿತ್ರ ಹಾಗೂ ವಾಟರ್ ಕಲರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವಿ ಅವರು ನಿರ್ಮಿಸಿರುವ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಹೋಂ ಮಿನಿಸ್ಟರ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹಾತ ಪತ್ರ ನೀಡಿದೆ.. ಸರ್ಕಾರ ಚಿತ್ರಮಂದಿರ ತೆರೆಯಲು ಒಪ್ಪಿಗೆ ನೀಡಿದ ಕೂಡಲೆ, ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆದಿದೆ...
ಶ್ರೀಹರಿ ನಾನು ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ..  'ಹೋಂ ಮಿನಿಸ್ಟರ್' ಅಂದರೆ ರಾಜಕೀಯ ಚಿತ್ರ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅದರ ಹೊರತಾಗಿ ಈ ಚಿತ್ರದಲ್ಲಿ ಈ‌‌ ಪದ ಯಾವ ರೀತಿ ಬಳಕೆಯಾಗಿದೆ ಎಂಬ ಕುತೂಹಲ ಚಿತ್ರ ಬಿಡುಗಡೆ ನಂತರವಷ್ಟೇ ತಿಳಿಯಲಿದೆ..
ಅದ್ದೂರಿ ತಾರಾಬಳಗ ಹಾಗೂ ಅಪಾರ ವೆಚ್ಚದ ಈ‌ ಚಿತ್ರದ ಚಿತ್ರೀಕರಣ ‌ಬೆಂಗಳೂರು, ಮಲೇಷಿಯಾ ಮುಂತಾದ ಕಡೆ ನಡೆದಿದೆ...
ಜಿಬ್ರಾನ್ ಸಂಗೀತ ನಿರ್ದೇಶನ, ಕುಂಜಮಣಿ ಛಾಯಾಗ್ರಹಣ, ಆಂತೋಣಿ ಸಂಕಲನ, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆ, ಸುರೇಶ್ ಕೊಡೂರು ಸಹ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ..
ಉಪೇಂದ್ರ, ವೇದಿಕಾ, ತಾನ್ಯ ಹೋಪ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕ ಅವಿನಾಶ್,ಸುಮನ್ ರಂಗನಾಥ್,  ಸಾಧುಕೋಕಿಲ,‌ ತಿಲಕ್, ಅಭಿಮನ್ಯು ಸಿಂಗ್, ವಿಜಯ್ ಚೆಂಡೂರ್, ಚಿದಾನಂದ್, ಬೇಬಿ ಆದ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲದ್ದಾರೆ...

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ಹೋಂ ಮಿನಿಸ್ಟರ್ ಬರುತ್ತಿದ್ದಾರೆ... - Chitratara.com
Copyright 2009 chitratara.com Reproduction is forbidden unless authorized. All rights reserved.