Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ ಹಾಲು ತುಪ್ಪ ಚಿತ್ರದ ಹಾಡುಗಳ ಸೀಡಿ ಬಿಡುಗಡೆ
Posted date: 17 Mon, Apr 2017 10:49:06 PM

  ಸ್ಮಿತ ಎಂಟರ್‌ಟೈನರ್ ಲಾಂಛನದಲ್ಲಿದೊಡ್ಮನೆ ವೆಂಕಟೇಶ್ ಅವರು ನಿರ್ಮಿಸುತ್ತಿರುವ ‘ಹಾಲು ತುಪ್ಪ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಪಾಂಡವಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ.  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಸಹ ಪೂರ್ಣಗೊಂಡಿದ್ದು, ಈಗ ರೀರೆಕಾರ್ಡಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಇಂದ್ರಸೇನಾ ಅವರು ಸಂಗೀತ ನೀಡಿರುವ ಚಿತ್ರದ ಹಾಡುಗಲ ಸೀಡಿ ಬಿಡುಗಡೆಯಾಗಲಿದೆ.

ಶಶಾಂಕ್ ರಾಜ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಆರ್.ವಿ.ನಾಗೇಶ್ವರ ರಾವ್ ಅವರ ಛಾಯಾಗ್ರಹಣವಿದೆ. ಸಂಜೀವ ರೆಡ್ಡಿ ಸಂಕಲನ, ನಾಗರಾಜ್ ನೃತ್ಯ ನಿರ್ದೇಶನ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ದೆಲೀಪ್ ದಿಲ್‌ಸೇ ರಚಿಸಿದ್ದಾರೆ. ಎ.ಆರ್.ಸಾಯಿರಾಂ ಸಂಭಾಷಣೆ ಬರೆದಿದ್ದಾರೆ. ಮೂರ್ತಿ ಅವರ ಸಹ ನಿರ್ಮಾಣವಿರುವ ಈ ಚಿತ್ರದ ತಾರಾಬಳಗದಲ್ಲಿ ಸೆಂಚುರಿ ಗೌಡ, ಗಡ್ಡಪ್ಪ, ಪವನ್, ಮೌನ, ಹೊನ್ನವಳ್ಳಿ ಕೃಷ್ಣ, ನಾಗರಾಜ ಕೋಟೆ, ಬಸವರಾಜ್ ಕಟ್ಟಿ, ಜಯರಾಂ, ಕುರಿ ಸುನೀಲ್ ಮುಂತಾದವರಿದ್ದಾರೆ
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ಹಾಲು ತುಪ್ಪ ಚಿತ್ರದ ಹಾಡುಗಳ ಸೀಡಿ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.