Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾರಾ ಅಬೂಬಕ್ಕರ್ ಅವರ ಜನ್ಮದಿನದಂದು 'ಸಾರಾ ವಜ್ರ' ಚಿತ್ರದ ಟ್ರೇಲರ್ ಬಿಡುಗಡೆ.
Posted date: 02 Thu, Jul 2020 04:16:50 PM

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ 'ಸಾರಾ ವಜ್ರ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಹಂಸಲೇಖ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ.

ಜೂನ್‌ ೩೦ ಸಾರಾ ಅಬೂಬಕ್ಕರ್ ಅವರ ೮೫ನೇ ಹುಟ್ಟುಹಬ್ಬ. ಅದರ ಪ್ರಯುಕ್ತ 'ಸಾರಾ ವಜ್ರ' ಚಿತ್ರತಂಡದಿಂದ ಲಹರಿ ಮ್ಯೂಸಿಕ್ ಮೂಲಕ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಬಗ್ಗೆ ಸಾರಾ ಅಬೂಬಕ್ಕರ್‌ ಅವರು ಹಿತನುಡಿಗಳನ್ನು ನುಡಿದಿದ್ದಾರೆ.
ಆರ್ನಾ ಸಾಧ್ಯ ನಿರ್ದೇಶನದ ಈ ಚಿತ್ರದ ಟ್ರೇಲರ್ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ, ರೂಪಾ ಅಯ್ಯರ್, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆ ಮಾತುಗಳಾಡಿದ್ದಾರೆ.

ಅನು ಪ್ರಭಾಕರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಉಳಿದ ಪಾತ್ರಗಳಲ್ಲಿ  ರೆಹಮಾನ್ ಹಾಸನ್, ರಮೇಶ್ ಭಟ್, ಶಂಖನಾದ ಅರವಿಂದ್,ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್ ಪೂಜಾರಿ, ವಿಭಾಸ್, ಸಾಯಿತೋಷಿತ್, ಅಂಕಿತ, ಆಯುಷ್ ಜಿ ಶೆಟ್ಟಿಮುಂತಾದವರಿದ್ದಾರೆ.
ಸಂಭ್ರಮ ಡ್ರೀಮ್ ಹೌಸ್ ಅರ್ಪಿಸುವ ಈ ಚಿತ್ರದ ನಿರ್ಮಾಪಕರು ದೇವೇಂದ್ರ ರೆಡ್ಡಿ ಹಾಗೂ ಸಂಭ್ರಮ ಡ್ರೀಮ್ ಹೌಸ್.

ಪರಮೇಶ್ ಸಿ.ಎಂ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಬಿ.ಎಂ.ಹನೀಫ್ ಬರೆದಿದ್ದಾರೆ.

ಬಹಳ ವರ್ಷಗಳ ನಂತರ ಹಂಸಲೇಖ ಸರ್ ಸ್ಟುಡಿಯೋದಲ್ಲಿ ಲೈವ್ ರೆಕಾರ್ಡಿಂಗ್ ಮಾಡಿದೆವು.!!
ಅದು "ಸಾರಾ ವಜ್ರ" ಎಂಬ ಫಿಲ್ಮಿನ ಹಿನ್ನೆಲೆ ಸಂಗೀತ..
ಇದೊಂದು ಅವಿಸ್ಮರಣೀಯ ಅನುಭವ... ಅದೂ ಈ ಕೊರೋನಾ ಭೂತದ ಭಯದ ನೆರಳಲ್ಲಿ..!!
 ರೆಕಾರ್ಡಿಂಗ್ ಮಾಡುವಾಗ ಮಾಸ್ಕ್ ಧರಿಸಿ ಅಂತರ ಕಾಪಾಡಿದ್ದೇವೆ.  ಫೋಟೋಗೋಸ್ಕರ ಮಾತ್ರ ತೆಗೆದಿದ್ದೇವೆ. ಎಂದು  ಸಂಗೀತ ನಿರ್ದೇಶಕ ವಿ.ಮನೋಹರ್ ತಿಳಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾರಾ ಅಬೂಬಕ್ಕರ್ ಅವರ ಜನ್ಮದಿನದಂದು 'ಸಾರಾ ವಜ್ರ' ಚಿತ್ರದ ಟ್ರೇಲರ್ ಬಿಡುಗಡೆ. - Chitratara.com
Copyright 2009 chitratara.com Reproduction is forbidden unless authorized. All rights reserved.