ಚಂದ್ರಕಾಂತ್ ಅವರ ರಚನೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ತಿಕೋನ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ‘ಯು/ಎ’ ಅರ್ಹತಾ ಪತ್ರವನ್ನು ಯಾವುದೇ ಕಟ್ ಅಥವಾ ಮ್ಯೂಟ್ ಇಲ್ಲದೆ ನೀಡಿದೆ. ಚಂದ್ರಕಾಂತ್ ‘143’ ಕನ್ನಡ ಸಿನಿಮಾ ಮೂಲಕ ಸದ್ದು ಮಾಡಿದ್ದ ಈಗ ‘ತ್ರಿಕೋನ’ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಆಯಾ ಭಾಷೆಗೆ ತಕ್ಕಂತೆ ಚಿತ್ರಕತೆ ಸಿದ್ದಪಡಿಸಿರುವುದು ವಿಶೇಷ. ಒಂದೇ ಕತೆ, ಪ್ರಾರಂಭ, ಅಂತ್ಯ ಇರಲಿದ್ದು, ತೋರಿಸುವ ಪರಿ ಮೂರು ರೀತಿಯಾಗಿರುತ್ತದೆ. ಇದಕ್ಕಾಗಿ ಮೂರು ಸಂಗೀತ ನಿರ್ದೇಶಕರು ಅಲ್ಲಿನ ನೇಟಿವಿಟಿಗೆ ತಕ್ಕಂತೆ ಶಬ್ದ ಒದಗಿಸಿದ್ದಾರೆ. ಎಲ್ಲರ ಜೀವನದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆ ಇರುವ ಘಟನೆಗಳು ಇರಲಿದೆ. 25 ವಯಸ್ಸಿನ, ನಲವತ್ತರ ಆಸುಪಾಸಿನ, ಹಿರಿಯ ನಾಗರೀಕ ಹೀಗೆ ಮೂರು ವಯೋಮಾನದವರ ಸನ್ನಿವೇಶಗಳು ದೃಶ್ಯಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ.
ರಾಜ್‌ವೀರ್ ಅಸ್ಮಿತೆಯುಳ್ಳ ಉದ್ಯಮಿಯಾಗಿ ತರುಣ. 40 ರ ವಯಸ್ಸಿನ ಜೋಡಿಗಳಾಗಿ ಅಚ್ಯುತರಾವ್-ಸುಧಾರಾಣಿ, ಹಿರಿಯ ದಂಪತಿಗಳಾಗಿ ಸುರೇಶ್‌ಹೆಬ್ಳಿಕರ್-ಲಕ್ಷೀ, ನಗಿಸಲು ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ. ಬಳ್ಳಾರಿಯ ಮಾರುತೇಶ್ ಮೂವರನ್ನು ಪರೀಕ್ಷೆಗೆ ಒಳಪಡಿಸುವ ನಕರಾತ್ಮಕ ಪಾತ್ರದಲ್ಲಿ ಅಭಿನಯಿಸಿರುವುದು ಹೊಸ ಅನುಭವ. ಎರಡು ಹಾಡುಗಳಿಗೆ ಸುರೇಂದ್ರನಾಥ್ ಸಂಗೀತವಿದೆ. ಲಾಕ್‌ಡೌನ್ ಮುಗಿದ ತರುವಾಯ ಬಿಡುಗಡೆ ಆಗುವ ಸಾದ್ಯತೆ ಇದೆ.