Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೇಫಾಗಿ ಮನೆಯಲ್ಲೇ ಇರಿ, ಅಣ್ಣಾವ್ರ ಪಿಚ್ಚರ್‌ ನೋಡ್ತಾ ಇರಿ
Posted date: 23 Thu, Apr 2020 01:42:15 PM

ಕರುನಾಡಿಗೆ ವರವಾಗಿ ಹುಟ್ಟಿಬಂದ ನಟಸಾರ್ವಭೌಮ ಡಾ.ರಾಜ್ಕುಮಾರ್ಸಿನಿಮಾ ಕೇವಲ ಮನೋರಂಜನಾ ಮಾಧ್ಯಮವಲ್ಲ, ಜನರನ್ನ-ಸಮಾಜವನ್ನ ಬದಲಾಯಿಸಬಲ್ಲ ಆಯುಧ ಅಂತ ತೋರಿಸಿಕೊಟ್ಟ ವರನಟ. ಗಾನಗಂಧರ್ವ ನಮ್ಮನ್ನಗಲಿ ಇಷ್ಟು ವರ್ಷಗಳಾದ್ರು ಅವ್ರೇ ಪ್ರೀತಿಯಿಂದ ಕರೆಯುತ್ತಿದ್ದ ಅಭಿಮಾನಿ ದೇವರುಗಳ ಹೃದಯದರಮನೆಯಲ್ಲಿ ಇವತ್ತಿಗೂ ಜೀವಂತ, ಅಮರ ಡಾ.ರಾಜ್ನಟಿಸಿದ ಪಿಚ್ಚರ್ಗಳು ಅಂದಿಗೂ ಇಂದಿಗೂ ಜೀವನಕ್ಕೆ, ಸಮಾಜಕ್ಕೆ ಮಾದರಿ, ಜನರನ್ನ ಬದಲಾಯಿಸುವ, ಅವ್ರ ಭಾವನೆಗಳನ್ನ ಜಾಗೃತಗೊಳಿಸುವ ಶಕ್ತಿ ಅವರ ಸಿನಿಮಾಗಳಿಗೆ ಇಂದಿಗೂ ಇದೆ.

ನಟಿಸಿದ ಅಷ್ಟೂ ಸಿನಿಮಾಗಳಲ್ಲಿ ನಾಯಕ ನಟರಾಗೇ ನಟಿಸಿದ, ಬಂಗಾರದ ಮನುಷ್ಯನ ಸಿನಿಮಾಗಳಲ್ಲಿ ಯಾವತ್ತೂ ಧೂಮಪಾನ, ಮದ್ಯಪಾನಗಳನ್ನ ಮಾಡದೇ ಮಾದರಿಯಾದ್ರೂ, ಪಟ್ಟಣ ಸೇರಿದ ವಿದ್ಯಾವಂತರನ್ನ ವಾಪಸ್ಹಳ್ಳಿಗಳ ಕಡೆಗೆ ಮುಖ ಮಾಡಿ ಗ್ರಾಮೀಣಾಭಿವೃದ್ಧಿಯ ಹರಿಕಾರನಾದ್ರು, ರಾಜಕೀಯವಾಗಿ ಬೆಳೆಯುವ ಅವಕಾಶಗಳಿದ್ರೂ, ತಮ್ಮ ಸಿನಿಮಾಗಳ ಮೂಲಕವೇ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದರುಕನ್ನಡಕ್ಕೊಬ್ಬನೇ ರಾಜಕುಮಾರʼ ಅನ್ನೋ ಅಭಿಮಾನಿಗಳ ನಂಬಿಕೆ ಇಂದಿಗೂ ಬದಲಾಗಿಲ್ಲ. ತಮ್ಮ ಆರಾಧ್ಯ ದೈವದಂತೆ ಪೂಜಿಸೋ ರಾಜ್ಕುಮಾರ್ಬರ್ತ್ಡೇ ಅಭಿಮಾನಿಗಳ ಪಾಲಿಗೆ ಹಬ್ಬ.

ಬಾರಿ ಕೊರೋನಾ ಲಾಕ್ಡೌನ್ಇರೋದ್ರಿಂದ ರಾಜ್ಯಾದ್ಯಂತ ಇರೋ ಸಾವಿರಾರು ಡಾ.ರಾಜ್ಅಭಿಮಾನಿ ಸಂಘಗಳಿಂದ, ಕೋಟ್ಯಂತರ ಅಭಿಮಾನಿಗಳಿಂದ ಅಣ್ಣಾವ್ರ ಹುಟ್ಟುಹಬ್ಬದ ಅದ್ಧೂರಿ ಆಚರಣೆ ಸಾಧ್ಯವಾಗ್ತಾ ಇಲ್ಲ.ಬೆಂಗಳೂರಿನ ಅವ್ರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಕನ್ನಡದ ಕಣ್ಮಣಿ ರಾಜಣ್ಣನಿಗೆ ನಮಿಸಲು ಆಗ್ತಾ ಇಲ್ಲ. ಆದರೂ ಅಭಿಮಾನಿಗಳೆಲ್ಲಾ ಮೇರುನಟನ ಹುಟ್ಟುಹಬ್ಬವನ್ನ ಮನೆಯಲ್ಲೇ ಇದ್ದು, ಆಚರಿಸೋದು ತುಂಬಾನೇ ಸುಲಭ. ಕಾರ್ಯಕ್ಕೆ ನಿಮಗೆ ಸಾಥ್ನೀಡ್ತಿದೆ ಕನ್ನಡದ ಪ್ರೀತಿಯ ಪಿಚ್ಚರ್ಚಾನೆಲ್ʻಜೀ ಪಿಚ್ಚರ್ʼ

 ಇದೇ .೨೪ರಂದು ಇಡೀ ದಿನ ವರನಟ ರಾಜ್ಕುಮಾರ್ಅಭಿನಯದ ಸಿನಿಮಾಗಳನ್ನ ಪ್ರಸಾರ ಮಾಡುವ ಮೂಲಕ ಅಣ್ಣಾವ್ರ ಪಿಚ್ಚರೋತ್ಸವವನ್ನೇ ಮಾಡ್ತಿದೆ ʻಜೀ ಪಿಚ್ಚರ್‌ʼ. ಅಭಿಮಾನಿ ದೇವರುಗಳು ಏಳುವ ಹೊತ್ತಿಗೆ ಅಣ್ಣಾವ್ರು ನಟಿಸಿರೋ ʻನ್ಯಾಯವೇ ದೇವರುʼ ಸಿನಿಮಾ ಪ್ರಸಾರ ಆಗ್ತಿದೆ.ನಂತ್ರ ಮನೆ ಮಂದಿಯೆಲ್ಲಾ ಕೂತು ನೋಡಲು, ಕನ್ನಡಕ್ಕೆ ಕಾಲದಲ್ಲೇ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ʻಮಯೂರʼ, ಮಧ್ಯಾಹ್ನ ಊಟದ ಹೊತ್ತಿಗೆ  ಡಾ.ರಾಜ್, ಭಾರತಿ ವಿಷ್ಣುವರ್ಧನ್ಅಭಿನಯದ ಸಾಮಾಜ ಮುಖಿ ಆಲೋಚನೆ ಹೊಂದಿದ್ದ ʻಮೇಯರ್ಮುತ್ತಣ್ಣʼ ಸಿನಿಮಾಗಳು ಪ್ರಸಾರವಾಗ್ತಾ ಇವೆ.

 ಅಂದು ಸಂಜೆ ೪ಕ್ಕೆ ವರನಟ ಡಾ.ರಾಜ್ಕುಮಾರ್ಹಾಡಿ, ಕುಣಿದು ಕುಪ್ಪಳಿಸಿದ ಅಪರೂಪದ ಸ್ಟೇಜ್ಶೋ ʻರಾಜಧಾನಿಯಲ್ಲಿ ರಾಜ್ರಸಸಂಜೆʼ ಕಾರ್ಯಕ್ರಮ ಪ್ರಸಾರವಾಗ್ತಿದೆ. ಸಂಜೆ ೭ಕ್ಕೆ ಕನ್ನಡ ಚಿತ್ರರಂಗದ ಚಿನ್ನದಂಥಾ ಸಿನಿಮಾ,  ಜೀ ಪಿಚ್ಚರ್ ಗೋಲ್ಡನ್ಪಿಚ್ಚರ್ʻಬಂಗಾರದ ಮನುಷ್ಯʼ ಪ್ರಸಾರವಾಗ್ತಾ ಇದೆ. ಇನ್ನು ರಾತ್ರಿ ೧೦ ಗಂಟೆಗೆ ಮೇರುನಟನ ನೂರನೇ ಸಿನಿಮಾ ʻಭಾಗ್ಯದ ಬಾಗಿಲುʼ ಪ್ರಸಾರವಾಗ್ತಿದೆ. ʻಜೀ ಪಿಚ್ಚರ್‌ʼ ಡಾ.ರಾಜ್ಪಿಚ್ಚರೋತ್ಸವಕ್ಕೆ ರಾಜ್ಪುತ್ರತ್ರಯರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಅವ್ರೆಲ್ಲಾ ಹೇಳೀರೋ ಹಾಗೆ, ಜೀ ಕುಟುಂಬದ ಆಶಯದಂತೆ, ಸುರಕ್ಷಿತವಾಗಿ ಮನೆಯಲ್ಲೇ ಇರೋಣ, ಅಣ್ಣಾವ್ರ ಪಿಚ್ಚರ್ನೋಡೋಣ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೇಫಾಗಿ ಮನೆಯಲ್ಲೇ ಇರಿ, ಅಣ್ಣಾವ್ರ ಪಿಚ್ಚರ್‌ ನೋಡ್ತಾ ಇರಿ - Chitratara.com
Copyright 2009 chitratara.com Reproduction is forbidden unless authorized. All rights reserved.