Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೈಕಾಲಜಿಕಲ್ ಥ್ರಿಲ್ಲರ್ ಕಥನ ಬ್ಲೂ ಐಸ್
Posted date: 04 Wed, Oct 2017 09:56:39 AM
ಈ ಹಿಂದೆ ಷಡ್ಯಂತ್ರ, ಮನಿ ಹನಿ ಶನಿ ಹಾಗೂ ರೆಡ್‌ನಂತಹ ವಿಭಿನ್ನ ನಿರೂಪಣೆಯ ಚಲನಚಿತ್ರಗಳಿಗೆ ಆಕ್ಷ್ಯನ್ ಕಟ್ ಹೇಳಿದ್ದ ನಿರ್ಮಾಪಕ ಹಾಗೂ ನಿರ್ದೇಶಕ ರಾಜೇಶ್ ಮೂರ್ತಿ ಈಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ. 
 
ಬ್ಲೂ ಐಸ್ ಎಂಬ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ನಿರ್ಮಾಣವನ್ನು ಸಹ ಮಾಡಿದ್ದಾರೆ. ಒಂದು ಸೈಕಾಲಜಿಕಲ್ ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಮೂಡಿಬರಲಿವೆ. ಆಫ್ರಿನ್ ಸಿದ್ದು, ನಿಶಾಂತ್, ಆರ್.ಜೆ.ಪೃಥ್ವಿ ಹಾಗೂ ನಾಸ್ತಿಯಾ ರಾಯ್ ಆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಹಿಂದೆ ರಾಜೇಶ್ ಮೂರ್ತಿಯವರ ನಿರ್ಮಾಣ ಸಾರಥ್ಯದಲ್ಲಿ ತಯಾರಾಗಿ ತೆರೆಗೆ ಬಂದಿದ್ದ ರೆಡ್ ಚಿತ್ರದಲ್ಲಿಯ ಏರೋಟಿಕ್ ಥ್ರಿಲ್ಲರ್ ಶೈಲಿಯ ಕಥಾನವಿತ್ತು. ಆ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಅದೇ ಸ್ಪೂರ್ತಿಯಿಂದ ಸೈಕಾಲಜಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನು ಬೆಳ್ಳಿತರೆಯ ಮೇಲೆ ತರಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಅಡಲ್ಟ್ ಕಟೆಂಟ್ ಹೊಂದಿರುವ ಸೈಕಾಲಜಿಕಲ್ ಸಿನಿಮಾ ಇದಾಗಿದ್ದು,
ಮನುಷ್ಯನ ಸಂಬಂಧಗಳ ಬಗ್ಗೆ ವಿಶೇಷವಾದ ಚಿತ್ರಕಥೆಯನ್ನು ನಿರ್ದೇಶಕ ರಾಜೇಶ್ ಮೂರ್ತಿಯವರು ಮಾಡಿಕೊಂಡಿದ್ದಾರೆ. 
 
ಈಗಾಗಲೇ ಚಿತ್ರೀಕರಣ ಪೋಸ್ಟ್ ಪ್ರೋಡಕ್ಷನ್‌ನ ಕೆಲಸಗಳೆಲ್ಲಾ ಮುಗಿದು ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಸದ್ಯದಲ್ಲೇ ಸೆನ್ಸಾರ್ ಮುಂದೆ ಪ್ರದರ್ಶನಗೊಳ್ಳಲಿರುವ ಬ್ಲೂ ಐಸ್ ಚಿತ್ರವನ್ನು ಆದಷ್ಟು ಬೇಗನೆ ಪ್ರೇಕ್ಷಕರ ಮುಂದೆ ತರಲು ನಿರ್ದೇಕರು ಅಣಿಯಾಗಿದ್ದಾರೆ. 
 
ರಾಜೇಶ್ ಮೂರ್ತಿ ಪ್ರೋಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ  ವಿನೋದ್ ಕ್ಯಾಮಾರಾ ವರ್ಕ್ ನಿಭಾಯಿಸಿದ್ದಾರೆ. ರಾಜೇಶ್ ಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ರಾಕಿ ಎಂ ರವರ ಸಾಹಿತ್ಯ ಹಾಗೂ ಸತೀಶ್ ಎಂ ರವರ ಸಂಕಲನ ಈ ಚಿತ್ರಕ್ಕಿದೆ. 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೈಕಾಲಜಿಕಲ್ ಥ್ರಿಲ್ಲರ್ ಕಥನ ಬ್ಲೂ ಐಸ್ - Chitratara.com
Copyright 2009 chitratara.com Reproduction is forbidden unless authorized. All rights reserved.