Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೆಂಡ್ತೀರ್ ದರ್ಬಾರ್ ಕಾಮಿಡಿ ಪ್ಯಾಕೇಜ್
Posted date: 3/July/2010

ರಮೇಶ್ ಅರವಿಂದ್ ಮತ್ತೊಮ್ಮೆ ಫ್ಯಾಮಿಲಿ ಪ್ಯಾಕೇಜ್ ಕೊಟ್ಟಿದ್ದಾರೆ. ಇಡೀ ಮನೆಮಂದಿ ಕುಳಿತು ನೋಡಬಹುದಾದ ಚಿತ್ರ ಹೆಂಡ್ತೀರ್ ದರ್ಬಾರ್. ಚಿತ್ರದಲ್ಲಿ ಕಾಮಿಡಿಯೇ ಹೈಲೈಟ್. ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇದೆ. ರಂಗಾಯಣ ರಘು, ಸಾಧುಕೋಕಿಲಾರಂಥ ಕಾಮಿಡಿ ಕಿಂಗ್‌ಗಳ ಜುಗಲ್‌ಬಂದಿಯಿದೆ. ಹಾಸ್ಯದ ಹಬ್ಬವೇ ಇದೆ.
ಯಾರಿಗೆ ಸಾಲುತ್ತೆ ಸಂಬಳ ಚಿತ್ರದ ಮೂಲಕ ಸದಭಿರುಚಿ ನಿರ್ದೇಶಕ ಎನ್ನುವುದನ್ನು ಪ್ರೂವ್ ಮಾಡಿರುವ ಶೇಖರ್ ಈಗ ಮತ್ತೊಂದು ಮನರಂಜನಾತ್ಮಕ ಚಿತ್ರ ಮಾಡಿದ್ದಾರೆ. ಒಂದು ಕುಟುಂಬದಲ್ಲಿ ನಡೆಯುವ ಕತೆಗೆ ಭಿನ್ನ ರೀತಿಯಲ್ಲಿ ಚಿತ್ರಕತೆ ಹೆಣೆದು, ನವಿರಾದ ಸಂಭಾಷಣೆ ಬರೆದಿದ್ದಾರೆ.
ಮಧ್ಯಮ ವರ್ಗದ ನೌಕರನೊಬ್ಬನ ಕತೆ. ಹೆಂಡತಿಯ ಮಾತು ಕೇಳಿ ಐಶಾರಾಮಿ ಜೀವನಕ್ಕೆ ಕಾಲಿಡಲು ಹೋದ ಆತ ಅಲ್ಲೇ ಎಡವಿ ಬೀಳುತ್ತಾನೆ. ನಂತರ-ಎಲ್ಲಾ ಹೆಂಗಸರಿಂದ ಎಂದು ಗೋಳಾಡುತ್ತಾನೆ. ಅಲ್ಲಿಂದ ಕತೆಯ ದಿಕ್ಕು ಬದಲಾಗುತ್ತದೆ. ಪ್ರೇಕ್ಷಕನ ದಿಕ್ಸೂಚಿಯೇ ಬದಲಾಗುತ್ತದೆ.
ರಮೇಶ್ ಎಂದಿನಂತೆ ಸೊಗಸಾಗಿ ನಟಿಸಿದ್ದಾರೆ. ಮೀನಾ ನಟನೆ ಬಗ್ಗೆ ಮತ್ತೆ ಹೇಳಬೇಕಿಲ್ಲ. ಅವರು ಆಲ್ ಈಸ್ ವೆಲ್!
ರಂಗಾಯಣ ರಘು ಸಾಧು ಬಹಳ ದಿನಗಳ ನಂತರ ಒಟ್ಟೊಟ್ಟಿಗೇ ನಗಿಸುತ್ತಾರೆ. ಈತ ಏತ ಆದರೆ, ಆತ ಪ್ರೇತ. ಇಬ್ಬರು ಪರದೆ ಮೇಲೆ ಬಂದರೆ ನಗು ಬರುತ್ತದೆ. ಆದರೆ, ನಿರ್ಮಾಪಕ ಕಮ್ ವಿಲನ್ ಪಾತ್ರಧಾರಿ ರಾಮಚಂದ್ರ ಅವರ ಅ-ಮೋಘ ಅಭಿನಯ(!) ವನ್ನು ಸಹಿಸಿಕೊಳ್ಳುವುದೇ ಒಂದು ಸವಾಲು. ಅವರ ಮಾತು ಕೆಲವಂತೂ ಅರ್ಥವೇ ಆಗುವುದಿಲ್ಲ. ಕೊಳ್ಳೇಗಾಲದ ಮೋರಿಯಲ್ಲಿ ಪೀಪಿ ಊದಿದ ಶಬ್ಧ ಕೇಳಿದ ಅನುಭವವಾಗುತ್ತದೆ!
ಒಟ್ಟಾರೆ ಇಡೀ ಚಿತ್ರ ಹಾಸ್ಯದ ಹೊನಲು. ನೋಡಲು ಮನಸ್ಸು ಬೇಕಷ್ಟೇ. ನೋಡಿ, ಎಂಜಾಯ್ ಮಾಡಿ!
ಹೆಂಡತಿಯರಿಗೆ ಜಯವಾಗಲಿ...!

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೆಂಡ್ತೀರ್ ದರ್ಬಾರ್ ಕಾಮಿಡಿ ಪ್ಯಾಕೇಜ್ - Chitratara.com
Copyright 2009 chitratara.com Reproduction is forbidden unless authorized. All rights reserved.