Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ನಾಳೆಯಿಂದ ತೆರೆಗೆ
Posted date: 24 Thu, May 2018 09:26:07 AM
ಶ್ರೀ ಕನಕ ದಾಸರ ರಚನೆಯ ಹಾಡಿನ ಸಾಲನ್ನು ಶೀರ್ಷಿಕೆ ಆಗಿ ಇಟ್ಟುಕೊಂಡಿರುವ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಕನ್ನಡ ಚಿತ್ರ ನಾಳೆಯಿಂದ ತೆರೆ ಕಾಣುತ್ತಿದೆ. ಕಲರ್ಸ್ ಆಫ್ ಆನೇಕಲ್ ಸುದರ್ಶನ್,ಜಿ, ರಾಮಮೂರ್ತಿ ಎಚ್ ಆರ್ ಹಾಗೂ ಅಕ್ಮೆ ಮೂವೀಸ್ ಹರೀಶ್ ಷೆರೀಗರ್ ನಿರ್ಮಾಪಕರುಗಳು.
ಕನ್ನಡ ಚಿತ್ರ ರಂಗದ ಸದಾ ಸುಂದರ ನಟ ಅನಂತ್ ನಾಗ್ ಹಾಗೂ ರಾಧಿಕಾ ಚೇತನ್ ಅಭಿನಯದ ಒಂದು ವಿಶಿಷ್ಟ ಕಥಾ ಹಂದರ ಹೊಂದಿರುವ ಚಿತ್ರದ ಕೆಲವು ಸನ್ನಿವೇಶಗಳು ಬುರ್ಜ್ ಖಲೀಫಾ ಕಟ್ಟಡದಲ್ಲಿ ಸೆರೆ ಹಿಡಿಯಲಾದ ಮೊದಲ ಕನ್ನಡ ಚಿತ್ರ, ಅನಂತ್ ನಾಗ್ ಅವರ ಪಾತ್ರ ಒಂದು ಪ್ರಶಾಂತ ಸಮುದ್ರ ಇದ್ದ ಹಾಗೆ. ಯುವ ಜನತೆಯನ್ನು ಪ್ರತಿನಿದಿಸುವವರು ನಾಯಕಿ ರಾಧಿಕಾ ಚೇತನ್.
ರಾಜ್ಯ ಪ್ರಶಸ್ತಿ ವಿಜೇತ ಕಬಡ್ಡಿ ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಇರುವ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಹಿಂದೂಸ್ಥಾನಿ ಶಾಸ್ಟ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತ ಒದಗಿಸಿದ್ದಾರೆ.

 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.