Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹ್ಯಾಂಗೋವರ್‌ಗೆ ನವರಸ ನಾಯಕ ಜಗ್ಗೇಶ್ ಅವರ ಧ್ವನಿ
Posted date: 31 Sat, Mar 2018 03:41:16 PM
ನವರಸ ನಾಯಕ ಜಗ್ಗೇಶ್ ಅವರ ಧ್ವನಿಯಿಂದಲೇ ಚಿತ್ರ ಆರಂಭ-ಅಂತ್ಯ ಮತ್ತು ಚಿತ್ರದಲ್ಲಿರುವ ಮೂವರು ನಾಯಕರ ಪರಿಚಯವೂ ಆಗುತ್ತದೆ. ಹ್ಯಾಂಗೋವರ್ ಅಂದ್ರೆ ಏನು? ಎಂಬದನ್ನು ಜಗ್ಗೇಶ್ ಅವರ ಧ್ವನಿಯ ಮುಖಾಂತರ ಚಿತ್ರ ನಿರ್ದೇಶಕ ವಿಠಲ್ ಭಟ್ ಹೇಳಲು ಹೊರಟಿದ್ದಾರೆ. 
ಹೊಸಬರು ಚಿತ್ರರಂಗಕ್ಕೆ ಬರಬೇಕು, ಹೊಸಾ ತಂಡ ಉಳಿಬೇಕು-ಬೆಳಿಬೇಕು ಮತ್ತು ಕನ್ನಡ ಚಿತ್ರರಂಗ ಉನ್ನತ ಶಿಖರಕ್ಕೇರಬೇಕು ಎಂಬ ಚಿತ್ರರಂಗದ ಮೇಲಿನ ಪ್ರೀತಿಯಿಂದಲೇ ಜಗ್ಗೇಶ್ ಅವರು ಸಾಕಷ್ಟು ಹೊಸಬರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಲ್ಲಿಯೂ ಜಗ್ಗೇಶ್ ಅಣ್ಣ ಪ್ರೀತಿಯಿಂದ ತಮ್ಮ ಧ್ವನಿಯನ್ನು ನೀಡುವುದರಿಂದ ಹ್ಯಾಂಗೋವರ್ ತಂಡಕ್ಕೆ ಮತ್ತಷ್ಟು ಭರವಸೆ ಹುಟ್ಟಿದೆ.
ರಮನೀ ರೀಲ್ಸ್ ಸಂಸ್ಥೆಯ ಚೊಚ್ಚಲ ಕೂಸು ಹ್ಯಾಂಗೋವರ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಸಧ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಸಿದ್ದತೆಗಳನ್ನು ನಡೆಸುತ್ತಿದೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನ ಇರುವ ಹ್ಯಾಂಗೋವರ್‌ಗೆ ಯೋಗಿ ಕ್ಯಾಮರಾ ಹಿಡಿದಿದ್ದು ರಾಖೇಶ್.ಡಿ ಹಣವನ್ನು ಹೊಂದಿಸಿದ್ದಾರೆ. ಕಿರಣ್ ಕತ್ತರಿಯಲ್ಲಿ ಚಿತ್ರ ಫೈನ್ ಟ್ಯೂನ್ ಆಗುತ್ತಿದೆ.
ಏಪ್ರಿಲ್ ಕೊನೆಯ ವಾರ ಬಿಡುಗಡೆ ಮಾಡಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ ಹ್ಯಾಂಗೋವರ್ ತಂಡ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹ್ಯಾಂಗೋವರ್‌ಗೆ ನವರಸ ನಾಯಕ ಜಗ್ಗೇಶ್ ಅವರ ಧ್ವನಿ - Chitratara.com
Copyright 2009 chitratara.com Reproduction is forbidden unless authorized. All rights reserved.