Chief Editor
Manohar. R (Manu)
Photo Journalist
chitrataramanu@gmail.com
+91 9845549026
೧೯/೧೧ ಚಿತ್ರಕ್ಕೆ ಹಾಡಿನ ಚಿತ್ರೀಕರಣ
Posted date: 08 Tue, Aug 2017 12:14:36 PM
 ಶ್ರೀನಿಲಯಂ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಇ.ಸುಷ್ಮಾ ಹಾಗೂ ಮಾಧವ ರೆಡ್ಡಿ ಅವರು ನಿರ್ಮಿಸುತ್ತಿರುವ ‘೧೯/೧೧‘ ಚಿತ್ರಕ್ಕಾಗಿ ರಾಘವೇಂದ್ರ ಕಾಮತ್ ಅವರು ಬರೆದಿರುವ ‘ನಾಜೂಕು ನಲ್ಲೆ ನಾ ನಡೆಯ ಬಲ್ಲೆ‘ ಎಂಬ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ನಲ್ಲಿ ನಡೆದಿದೆ. ಸಾಕ್ಷಿ ಅಗರವಾಲ್ ಅಭಿನಯಿಸಿರುವ ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಭಿಲಾಶ್ & ಜೋಯಲ್ ಅವರು sಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕಿ ವಸುಂಧರ ದಾಸ್ ಹಾಡಿದ್ದಾರೆ. 
 
ಆರ್ಯನ್ ಎಂ ಪ್ರತಾಪ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಶೇಕಡಾ ಐವತ್ತರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಮುಂದಿನ ಹಂತದ ಚಿತ್ರೀಕರಣ ಕುದುರೆಮುಖ, ಚಿಕ್ಕಮಗಳೂರು, ಯೂರೋಪ್‌ನಲ್ಲಿ ನಡೆಯಲಿದೆ.
 
ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಅಭಿಲಾಶ್ & ಜೋಯಲ್, ಲಯ ಕೋಕಿಲ ಹಾಗೂ ಲಿಜೊ ಜಸ್ ಸಂಗೀತ ನೀಡಿದ್ದಾರೆ. ರಾಘವೇಂದ್ರ ಕಾಮತ್, ಎ.ಆರ್.ಬಾಬು, ಆರ್ಯನ್ ಪ್ರತಾಪ್ ‘೧೯/೧೧‘ ಚಿತ್ರದ ಹಾಡುಗಳನ್ನು ಬರೆದಿದ್ದು, ಆಶಾ ಬೋಸ್ಲೆ, ವಸುಂಧರಾ ದಾಸ್, ಶಂಕರ್ ಮಹದೇವನ್, ಚಿತ್ರಾ, ವಿಜಯ ರಾಘವೇಂದ್ರ, ಚೇತನ್ ನಾಯಕ್, ಜೋಯಲ್ ಡುಬ್ಬಾ ಮತ್ತು ಆರ್ಯನ್ ಪ್ರತಾಪ್ ಹಾಡಿದ್ದಾರೆ. 
 
ಸುಬ್ರಮಣ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಆಂತೋನಿ ಅವರ ಸಂಕಲನವಿದೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪೂಜಾ ಲೋಕೇಶ್, ಸಾಕ್ಷಿ ಅಗರವಾಲ್, ಕುಮಾರ್ ಗೋವಿಂದ್, ಲಂii ಕೋಕಿಲ, ಅಸ್ಮಯ್ ಶೆಟ್ಟಿ, ವಸಿಷ್ಟ, ಪಲ್ಲವಿ ನಾಯಕ್, ರಕ್ಷಕ್, ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಗಿರಿಜಾ ಲೋಕೇಶ್, ರವಿ ಕಾಳೆ, ಚಂದ್ರಶೇಖರ್, ಓಂ ತೇಜ್, ಮಂಜುನಾಥ್, ಸಂಜಯ್, ಮಾಸ್ಟರ್ ಅನುರಾಗ್ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ೧೯/೧೧ ಚಿತ್ರಕ್ಕೆ ಹಾಡಿನ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.