Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾಸ್ತಿ ಗುಡಿ ಒಂದು ಭರ್ಜರಿ ಅನುಭವ ನೀಡುವ ಚಿತ್ರ
Posted date: 09 Tue, May 2017 09:45:36 AM

ಈ ಹಿಂದೆ ‘ಗಂಧದ ಗುಡಿ’ ಎಂಬ ಮಹೋನ್ನತ ಚಿತ್ರ ಡಾ ರಾಜಕುಮಾರ್, ಡಾ ವಿಷ್ಣುವರ್ಧನ, ಕಲ್ಪನ ಅವರ ಅಭಿನಯದ ಸಿನಿಮಾ ವನ್ಯ ಸಂರಕ್ಷಣೆ, ಪ್ರಾಣಿಗಳ ರಕ್ಷಣೆ, ಪರಿಸರ ಉಳಿಸಿ ಬಗ್ಗೆ ಕಾಳಜಿ ವಹಿಸಿದ ಮನರಂಜನಾತ್ಮಕ ಸಿನಿಮಾ ಧಾಖಲೆಗೆ ಸೇರಿದೆ.ಇಂದು ‘ಮಾಸ್ತಿ ಗುಡಿ’.
ಇಂದಿಗೂ ನಮ್ಮ ಪರಿಸರ, ಪ್ರಾಣಿ, ಪ್ರಕೃತಿಯ ರಕ್ಷಣೆ ಅಗತ್ಯತೆ ಹಾಗೂ ಅದರ ರಕ್ಷಣೆ ಮುಖ್ಯ ಎಂದು ಹೇಳುವ ಮಟ್ಟಿಗೆ ನಾವಿದ್ದೇವೆ. ಅದನ್ನೇ ಈ ‘ಮಾಸ್ತಿ ಗುಡಿ’ ಕನ್ನಡ ಸಿನಿಮಾ ಭರ್ಜರಿ ಆಗಿ ಪ್ರೇಕ್ಷಕನಿಗೆ ತಲುಪಿಸುತ್ತಿದೆ.
ಮುಖ್ಯವಾಗಿ ಈ ‘ಮಾಸ್ತಿ ಗುಡಿ’ ಹುಲಿ ಸಂರಕ್ಷಣೆ ಜೊತೆಗೆ ವನ್ಯ ಜೀವನದ ಬಗ್ಗೆ ಹೇಳುತ್ತದೆ. ನಮ್ಮ ಮನೆಯಲ್ಲಿ ಕೊಳಾಯಿಯಲ್ಲಿ ನೀರು ಬರಬೇಕು ಅಂದರೆ ಪರಿಸರದಲ್ಲಿ ಪ್ರಕೃತಿ ನಿಯಮದಂತೆ ಹುಲಿ ರಕ್ಷಣೆ ಮುಖ್ಯ ಎಂಬ ವಿಚಾರ ‘ಟ್ಯಾಪ್ ಟು ಟೈಗರ್’ ನೀತಿಯಲ್ಲಿ ಹೇಳುತ್ತಿದೆ. ಕರ್ನಾಟಕದ ಪರಿಸರದ ನಾಶ ಯಾವ ರೀತಿ ಯಾರಿಂದ ಆಗುತ್ತಿದೆ ಎಂಬುದನ್ನೂ ಸಹ ಈ ಸಿನಿಮಾ ತಿಳಿಸಿ ಕೊಡುತ್ತದೆ. ಈ ಸಿನಿಮಾದಲ್ಲಿ ಸಂಭವಿಸಿದ ಅಪಘಾತದಲ್ಲಿ ನಟರುಗಳಾದ ಅನಿಲ್ ಕುಮಾರ್ ಹಾಗೂ ರಾಘವ್ ಉದಯ್ ದುರ್ಮರಣ ಕಂಡಿದ್ದು ಇಡೀ ಚಿತ್ರತಂಡವನ್ನು ಬೆಚ್ಚಿ ಬೆಳಿಸಿದ್ದು ಆಗಿದೆ. ಅವರ ನೆನಪಿಗಾಗಿ ಈ ಸಿನಿಮಾ ಅರ್ಪಣೆ ಸಹ ಮಾಡಲಾಗುತ್ತಿದೆ. ಅನಿಲ್ ಕುಮಾರ್ ಈ ಚಿತ್ರದ ಜಂಟಿ ನಿರ್ಮಾಪಕ ಸಹ.

ಹ್ಯಾಟ್ರಿಕ್ ನಿರ್ದೇಶಕ ನಾಗಶೇಖರ್ (ಅರಮನೆ, ಸಂಜು ವೆಡ್ಸ್ ಗೀತ ಹಾಗೂ ಮೈನಾ ಸಿನಿಮಾಗಳ ನಿರ್ದೇಶಕ) ಅವರ ಹೊಸ ಬಗೆಯ ಸಾಹಸಮಯ ಹಾಗೂ ಹೃದಯಂಗಮ ಚಿತ್ರ ‘ಮಾಸ್ತಿ ಗುಡಿ’.

‘ಮಾಸ್ತಿ ಗುಡಿ’ ನಮ್ಮ ಸಾಮಾಜಿಕ ಜೀವನಕ್ಕೆ ಹೇಗೆ ಸಂಬಂದ ಪಡುವುದು ಎಂಬ ಹೊಸ ಆಲೋಚನೆ ಸಹ ನಿರ್ದೇಶಕ ನಾಗಶೇಖರ್ ಅವರ ಅಧ್ಯಯನದ ತಂಡದಿಂದ ತಿಳಿದು ಬಂದಿದೆ.

ಈ ಚಿತ್ರದ ಕಥಾ ವಸ್ತು ಒದಗಿಸಿದವರೆ ಚಿತ್ರದ ಕಥಾ ನಾಯಕ ಬ್ಲಾಕ್ ಕೋಬ್ರಾ ಧುನಿಯ ವಿಜಯ್. ಇವರಿಗೆ ಈ ಚಿತ್ರದಲ್ಲಿ ವಿಶೇಷ ಗೆಟ್ ಅಪ್ ಸಹ ಅಳವಡಿಸಲಾಗಿದೆ. ಮೋಹಕ ಬೆಡಗಿ ಅಮೂಲ್ಯ ಅವರ ವಿವಾಹದ ದಿನದಂದೆ ಅವರ ‘ಮಾಸ್ತಿ ಗುಡಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಕೃತಿ ಖರಬಂದ ಈ ಚಿತ್ರದ ಮತ್ತೊಬ್ಬ ನಾಯಕಿ.

ಈ ಚಿತ್ರದಲ್ಲಿ ರಂಗಾಯಣ ರಘು, ಶ್ರೀ ನಿವಾಸಮೂರ್ತಿ ಅವರಿಗೆ ವಿಶೇಷ ಬಗೆಯ ಮೇಕ್ ಅಪ್ ಮಾಡಲಾಗಿದೆ. ಸುಹಾಸಿನಿ ಮನಿರತ್ನಂ, ದತ್ತಣ್ಣ, ಬಿ ಜಯಶ್ರೀ, ದೇವರಾಜ್, ಶೋಭರಾಜ್ ಸಹ ತಾರಾಗಣದಲ್ಲಿ ಇದ್ದಾರೆ.

ಕವಿರಾಜ್ ಅವರ ಗೀತ ಸಾಹಿತ್ಯಕ್ಕೆ ಸಾಧು ಕೋಕಿಲ ಅವರ ಸಂಗೀತ ಅಲ್ಲದೆ ಹಿನ್ನಲೆ ಸಂಗೀತ ಸಹ ಒದಗಿಸಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ,ಜೋನಿ ಹರ್ಷ ಅವರ ಸಂಕಲನ, ಕಲೈ ಅವರ ನೃತ್ಯ, ಎಂ ಎಸ್ ರಮೇಶ್ ಅವರ ಸಂಭಾಷಣೆ, ಡಾ ರವಿ ವರ್ಮ, ವಿಜಯ್ ಹಾಗೂ ವಿನೋದ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಇದೆ.

ಕೆ‌, ಪಿ ಎಸ್ ಕಂಬೈನ್ಸ್ ಅಡಿಯಲ್ಲಿ ಸುಂದರ್ ಗೌಡ್ರು ಹಾಗೂ ಅನಿಲ್ ಕುಮಾರ್ ಅವರು ಈ ಚಿತ್ರವ ನಿರ್ಮಾಣ ಮಾಡಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಸ್ತಿ ಗುಡಿ ಒಂದು ಭರ್ಜರಿ ಅನುಭವ ನೀಡುವ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.