Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಗಡ್ ವಿನೋದ್ ಪ್ರಭಾಕರ್ 8 ಪ್ಯಾಕ್ ಆಬ್ ಚಿತ್ರ
Posted date: 28 Thu, Mar 2019 08:54:17 AM

ಕನ್ನಡ ಚಿತ್ರ ರಂಗದಲ್ಲೇ ಪ್ರಥಮ ಬಾರಿಗೆ ನಟ ವಿನೋದ್ ಪ್ರಭಾಕರ್ ೮ ಪ್ಯಾಕ್ ಆಬ್ ಸೃಷ್ಟಿಸಿಕೊಂಡು ನಟಿಸಿರೋ ಚಿತ್ರ ರಗಡ್. ಈ ಚಿತ್ರ ನಾಳೆಯಿಂದ ರಾಜ್ಯಾಧ್ಯಂತ ತೆರೆ ಕಾಣಲಿದೆ.
‘ರಗಡ್’ ಸಾಹಸ ಭರಿತ ಚಿತ್ರ. ಆದರೆ ಲವ್, ಸೆಂಟಿಮೆಂಟ್ ಸಹ ತುಂಬಿಕೊಂಡಿದೆ. ನಿರ್ಮಾಪಕ ಎ ಅರುಣ್ ಕುಮಾರ್ ಅಮ್ಮ ಸಿನಿ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀ ಮಹೇಶ್ ಗೌಡ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನ ಮಾಡಿದ್ದಾರೆ. ಅಭಿಮನ್ ರಾಯ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಜೈ ಆನಂದ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಹಾಗೂ ವಿನೋದ್ ಸಾಹಸ, ಮೋಹನ್ ಮತ್ತು ಧನಂಜಯ್ ನೃತ್ಯ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮಾಡಿರುವರು.
ವಿನೋದ್ ಪ್ರಭಾಕರ್ ನಾಯಕಿ ಆಗಿ ಚೈತ್ರ ರೆಡ್ಡಿ ಅಭಿನಯಿಸಿದ್ದಾರೆ. ಎನ್ ಓಂ ಪ್ರಕಾಶ್ ರಾವ್, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನಿ ಕುಟ್ಟಪ್ಪ, ಕೃಷ್ಣ ಅಡಿಗ, ಸುರೇಶ್ ಗೌಡ, ಮಾಲತಿ ದೇಶ್ಪಾಂಡೆ, ರೋಬೊ ಗಣೇಶ್, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ವಿನೋದ್, ಕೆ ವಿ ಮಂಜಯ್ಯ ಹಾಗೂ ಇತರರು ತಾರಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಗಡ್ ವಿನೋದ್ ಪ್ರಭಾಕರ್ 8 ಪ್ಯಾಕ್ ಆಬ್ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.