Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜಲಕ್ಷ್ಮೀ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣ
Posted date: 30 Tue, Apr 2019 09:22:42 AM

ಎಸ್.ಕೆ.ಎಂ ಮೂವೀಸ್ ಲಾಂಛನದಲ್ಲಿ ಮೋಹನ್ ಕುಮಾರ್ ಎಸ್.ಕೆ ಅವರು ನಿರ್ಮಿಸುತ್ತಿರುವ ‘ರಾಜಲಕ್ಷ್ಮೀ‘ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.  ಮಂಡ್ಯ, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.
ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಗರಾಜಮೂರ್ತಿ ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಕಾಂತರಾಜ್ ಬರೆದಿದ್ದಾರೆ. ಕಿರಣ್-ಅರ್ಜುನ್ ಸಂಕಲನ, ನವೀನ್ ಕನ್ನಡಿಗ ನೃತ್ಯ ನಿರ್ದೇಶನ, ಸಂಕರ್ ಶಾಸ್ತ್ರಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಗಡಿ ಯತೀಶ್ ಸಂಭಾಷಣೆ ಬರೆದಿದ್ದಾರೆ.
ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ನವೀನ್ ತೀರ್ಥಹಳ್ಳಿ, ರಶ್ಮಿಗೌಡ, ಚಂದ್ರಪ್ರಭ(ಮಜಾಭಾರತ), ಸ್ಟೈಲ್ ಶಶಿ, ಸೀತಾರಾಂ, ಮುತ್ತುರಾಜ್, ಸದಾನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಮರಾಜ್ಯದ ಥರಹ ಇದ್ದ ಊರೊಂದು ಕಾರಾಣಾಂತರದಿಂದ ರಾವಣರಾಜ್ಯವಾಗುತದೆ. ಮತ್ತೆ ಆ ಊರು ರಾಮರಾಜ್ಯ ಹೇಗೆ ಆಗುತ್ತದೆ ಎಂಬ ಕಥಾಹಂದರದ ಜೊತೆಗೆ ಈ ಚಿತ್ರದಲ್ಲಿ ಲವ್ ಸ್ಟೋರಿ ಕೂಡ ಇರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜಲಕ್ಷ್ಮೀ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.