Chief Editor
Manohar. R (Manu)
Photo Journalist
chitrataramanu@gmail.com
+91 9845549026
ZEE ಕನ್ನಡದಲ್ಲಿ ಮತ್ತೊಮ್ಮೆ ಬರಲಿದೆ ಸಾಧಕರ ಜೀವನಗಾಥೆ
Posted date: 10 Fri, Apr 2020 01:52:38 PM

 ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್ನ(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ. ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ. ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ. ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್  ಕೇವಲ ೧೯ ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ.

ಪ್ರತಿ ಶನಿವಾರ ಹಾಗೂ ಭಾನುವಾರ ಬಂತು ಅಂದ್ರೆ ಸಾಕು ಕರ್ನಾಟಕದ ಬಹುತೇಕ ಮನೆಗಳಲ್ಲಿ ಕಣ್ಣಾಲಿಗಳು ಒದ್ದೆಯಾಗ್ತಿದ್ವು. ಮುಖದಲ್ಲಿ ಕಿರುನಗೆಯೊಂದು ಮೂಡುತ್ತಿತ್ತು. ಸಾಧನೆ ಮೆಟ್ಟಿಲೇರಬೇಕೆನ್ನೋ ಆಶಯವನ್ನೊತ್ತ ಅನೇಕರಿಗೆ ಸ್ಪೂರ್ತಿ ಸಿಗುತ್ತಿದ್ದಿದ್ದೇ ವಾರಾಂತ್ಯಕ್ಕೆ. ಅಷ್ಟರ ಮಟ್ಟಿಗೆ ಜನರ ಮನಸಿನ ಮೇಲೆ ಪ್ರಭಾವ ಬೀರ್ತಿದ್ದ ಕಾರ್ಯಕ್ರಮವೇ ವೀಕೆಂಡ್ ವಿಥ್ ರಮೇಶ್.

ಹೌದು, ವೀಕೆಂಡ್ ವಿಥ್ ರಮೇಶ್ fÃó ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಈಗಾಗಲೇ 4 ಸೀಜನ್ ಗಳಲ್ಲಿ ಪ್ರಸಾರಗೊಂಡು ಅತ್ಯಂತ ಜನಪ್ರಿಯತೆ ಪಡೆದ ಇದೇ ರಿಯಾಲಿಟಿ ಶೋನಲ್ಲಿ ಇಲ್ಲಿವರೆಗೂ ಯಶ್, ಪುನೀತ್ ರಾಜ್ಕುಮಾರ್, ದರ್ಶನ್,  ಜಗ್ಗೇಶ್, ಶಿವರಾಜಕುಮಾರ್, ವಿಜಯ್ ಸಂಕೇಶ್ವರ, ದುನಿಯಾ ವಿಜಿ, ಡಾ|| ವೀರೆಂದ್ರ ಹೆಗಡೆ, ಸುಧಾ ಮೂರ್ತಿ, ನಾರಾಯಣ್ ಮೂರ್ತಿ, ಹೀಗೆ ಅನೇಕ ಸಾಧಕರು ಹಾಟ್ ಸೀಟ್ ನಲ್ಲಿ  ಕುಳಿತು ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ.

ಬದುಕಿನ ಏಳು-ಬೀಳಿನ ಕಥೆ ಹೇಳಿದ್ದಾರೆ. ಹೂ ಮುಳ್ಳುಗಳಿಂದ ಕೂಡಿದ ಸಾಧಕರ ಇದೇ ಸಾಧನೆಯ ಹಾದಿ ಇತರ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದು ಸುಳ್ಳಲ್ಲ. ಇನ್ನು, ರಮೇಶ್ ಅರವಿಂದ್ ಅವರನಿರೂಪಣೆಯೂ ಇದೇ ಕಾರ್ಯಕ್ರಮದ ಯಶಸ್ಸಿನ ಸೂತ್ರಗಳಲ್ಲೊಂದು. ಇವತ್ತಿಗೂ ಕರ್ನಾಟಕದಲ್ಲಿ ಚಿಣ್ಣರಿಂದ ಹಿಡ್ದು ದೊಡ್ಡವರವರೆಗೂ ನಿಮ್ಮ ಇಷ್ಟದ ರಿಯಾಲಿಟಿ ಶೋ ಯಾವದು ಎಂದು ಕೇಳಿದ್ರೆ ಸಿಗುವ ಉತ್ತರವೇ ವೀಕೆಂಡ್ ವಿಥ್ ರಮೇಶ್. ಇಂತಹ ವಿಕೇಂಡ್ ವಿತ್ ರಮೆಶ್ ಲಾಕ್ ಡೌನ್ ಹಿನ್ನಲೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಮರು ಪ್ರಸಾರವಾಗಲಿದೆ.

ಇಂದು ಅಭಿಮಾನಿಗಳ ಯಜಮಾನ, ಸ್ಯಾಂಡಲ್ವುಡ್ನ  ಸುಲ್ತಾನ್ ಅಂತ ಕರೆಸಿಕೊಳ್ಳುವ ದರ್ಶನ್, ತಮ್ಮ ಆರಂಭದ ದಿನಗಳಲ್ಲಿ ಪಟ್ಟ ಕಷ್ಟ ಮಾತ್ರ ಹೇಳತೀರದು, ಡಿ ಬಾಸ್ ತಮ್ಮ ಜೀವನದ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಹೇಳಿಕೊಂಡಿಲ್ಲಾ, ಆದ್ರೆ ಜೀ಼ ಕನ್ನಡ ವಾಹಿನಿಯ ಪ್ರಸಿದ್ಧ ಶೋ ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ದರ್ಶನ್ ತಮ್ಮ ಜೀವನದ ಖುಷಿಯ ಕ್ಷಣಗಳನ್ನ ನೆನೆದು ಖುಷಿ ಪಟ್ರು, ಹಾಗೆ ತಮ್ಮ ಕಡು ಕಷ್ಟದ ದಿನಗಳನ್ನ ನೆನೆದು ಭಾವುಕರಾಗಿದ್ರು.

ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ನಿಧನದ ದಿನ ನಡೆದ ಆ ಮನಕಲುಕುವ ಸನ್ನಿವೇಶವನ್ನ ಈ ಶೋನಲ್ಲಿ  ದಚ್ಚು ವಿವರಿಸಿದ್ರು. ಮೊದಲ ಸಿನಿಮಾ ರಿಲೀಸ್ ಬಗ್ಗೆ, ಕೆಲ ಸಿನಿಮಾಗಳು ಸೋತಾಗ ಚಿತ್ರರಂಗ ಅವ್ರನ್ನ ನಡೆಸಿಕೊಂಡ ಬಗ್ಗೆ ವಿವರಸಿ ಹೇಳಿದ್ರು. ತಮ್ಮ ಹಳೆಯ ಗೆಳೆಯರನ್ನ ನೋಡಿ ಖುಷಿ ಪಟ್ಟಿದ್ರು. ಎಲ್ಲಕಿಂತ ಹೆಚ್ಚಾಗಿ ನೀನಾಸಂನಲ್ಲಿ ಅವ್ರನ್ನ ಪ್ರೀತಿಯಿಂದ ನೋಡಿಕೊಂಡ ರತ್ನಕ್ಕ ಅವ್ರನ್ನ ಕಂಡು ಡಿ ಬಾಸ್ ಭವುಕರಾಗಿದ್ರು.

ಡಿ ಬಾಸ್ ಅವರಜೀವನವನ್ನ ಮತ್ತೊಮ್ಮೆ ನೋಡುವ ಸುವರ್ಣಾವಕಾಶ ಈಗ ನಿಮ್ಮದಾಗಿದೆ. ಇದೆ ಶನಿವಾರ ಹಾಗು ಭಾನುವಾರ ಮಧ್ಯಾಹ್ನ, ದರ್ಶನ್ ಅವ್ರು ಭಾಗವಹಿಸಿದ್ದ ವೀಕೆಂಡ್ ವಿಥ್ ರಮೇಶ್ ಎಪಿಸೋಡ್ ಜೀ಼ ಕನ್ನಡ ವಾಹಿನಿ ಮರು ಪ್ರಸಾರ ಮಾಡಲಿದೆ. ಲಾಕ್ ಡೌನ್ ನಲ್ಲಿ ಹೇಗೆ ಟೈಮ್ ಪಾಸ್ ಮಾಡಬೇಕು ಅಂದುಕೊಂಡ ನಿಮಗೆ ಜೀ಼ ಕನ್ನಡ ದರ್ಶನ್ ಅವರ ಎಪಿಸೋಡ್ ಪ್ರಸಾರ ಮಾಡುವ ಮೂಲಕ ಭರ್ಜರಿ ಔತಣವನ್ನ ಉಣಬಡಿಸಲಿದೆ.

ನವರಸ ನಾಯಕ  ಜಗ್ಗೇಶ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹುಸಿ ತಮ್ಮ ನೋವು-ನಲಿವನ್ನ ಹಂಚಿಕೊಂಡಿದ್ದರು. ಜಡೆಮಾಯಸಂದ್ರದ ಈಶ್ವರ್ ಗೌಡ ಜಗ್ಗೇಶ್ ಆಗಿ ಕನ್ನಡ ನಾಡಿನ ಹಾಸ್ಯ ಸಾರ್ವಭೌಮನಾಗಿ ಮೆರದ ಕಥೆಯೇ ರೋಚಕ. ಜಗ್ಗೇಶ್ ಅವರ ಲವ್ ಸ್ಟೋರಿ ಕೂಡ ಅದಕ್ಕಿಂತ ರೋಚಕ. ನವರಸ ನಾಯಕ ಜಗ್ಗೇಶ್ ವೀಕೆಂಡ್ ವಿಥ್ ರಮೇಶ್ ಸೆಟ್ ನಲ್ಲಿಯೇ ವಿವಾಹವಾದ ವಿಶಿಷ್ಟ ಕಾರ್ಯಕ್ರಮ ಅಭಿಮಾನಿಗಳಲ್ಲಿ ಅಪಾರ ಸಂತೋಷ ತಂದಿತ್ತು. ಜಗ್ಗೇಶ್ ಅವರ ಜೀವನದ ಕಥೆಗಳನ್ನು ಹಾಗು ಯಜಮಾನನ  ಜೀವನದ ಅಸಲಿ ಸತ್ಯವನ್ನ ಮತ್ತೊಮ್ಮೆ ವೀಕೆಂಡ್ ವಿಥ್ ರಮೇಶ್ ಎಪಿಸೋಡ್ ನಲ್ಲಿ  ನೋಡಿ ಆನಂದಿಸಿ.

ಏಪ್ರಿಲ್ 11 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ದರ್ಶನ್ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಜಗ್ಗೇಶ್ ಎಪಿಸೋಡ್ ಪ್ರಸಾರವಾಗಲಿದೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಹಿಸ್ಟರಿಯಲ್ಲಿಯೇ ಅತೀ ಹೆಚ್ಚು ವೀಕ್ಷಣೆಗೊಳ್ಪಟ್ಟಿರೋದು ಇವೆರಡೇ ಎಪಿಸೋಡುಗಳು ಅನ್ನೋದು ನಿಮ್ಮ ಗಮನಕ್ಕಿರಲಿ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ZEE ಕನ್ನಡದಲ್ಲಿ ಮತ್ತೊಮ್ಮೆ ಬರಲಿದೆ ಸಾಧಕರ ಜೀವನಗಾಥೆ - Chitratara.com
Copyright 2009 chitratara.com Reproduction is forbidden unless authorized. All rights reserved.