Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮದ್ವೆ ದಿಬ್ಬಣದ ಹಾಡು
Posted date: 17 Mon, Apr 2017 10:52:57 PM


   ಬಿ.ಎನ್.ಆರ್ ಫ಼ಿಲಂಸ್ ಲಾಂಛನದಲ್ಲಿ ಬಾ.ನಾ.ರವಿ ಅವರು ನಿರ್ಮಿಸುತ್ತಿರುವ ‘ಮದ್ವೆ ದಿಬ್ಬಣ  ಚಿತ್ರಕ್ಕಾಗಿ ನಾಗೇಶ್ ಉಜ್ಜಿನಿ ಅವರು ಬರೆದಿರುವ ‘ಜೋಡಿ ನಂಗೆ ಹುಡುಗಿ ನೀನು. ಮಾಡೇ ಬಿಟ್ಟೆ ಮೋಡಿಯಾ‘ ಎಂಬ ಹಾಡಿನ ಚಿತ್ರೀಕರಣ ಕೋರೆಗಾಲದಲ್ಲಿ ಹಾಕಲಾಗಿದ್ದ ಸೆಟ್‌ನಲ್ಲಿ ನಡೆದಿದೆ. ‘ಕಾಮಿಡಿ ಕಿಲಾಡಿಗಳು‘ ರಿಯಾಲಿಟಿ ಶೋನಲ್ಲಿ ಪ್ರಥಮ ಬಹುಮಾನ ಪಡೆದಿದ್ದ ಶಿವರಾಜ್ ಕೆ.ಆರ್.ಪೇಟೆ, ಅಭಿಷೇಕ್, ಸೋನಾಲ್ ಅಭಿನಯಿಸಿದ ಈ ಹಾಡಿಗೆ ಸ್ಟಾರ್ ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ.
   ಎಸ್.ಉಮೇಶ್ ನಿರ್ದೇಶನದ ಈ ಚಿತ್ರಕ್ಕೆ ಶೇಕಡ ೮೦ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಚಂದ್ರು ಬೆಳವಂಗಲ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ, ಅಭಿಷೇಕ್, ಸೋನಾಲ್, ರವಿಕಿರಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸದ್ಯದಲ್ಲೇ ‘ಹಾಲು ತುಪ್ಪ’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ
  ಸ್ಮಿತ ಎಂಟರ್‌ಟೈನರ್ ಲಾಂಛನದಲ್ಲಿದೊಡ್ಮನೆ ವೆಂಕಟೇಶ್ ಅವರು ನಿರ್ಮಿಸುತ್ತಿರುವ ‘ಹಾಲು ತುಪ್ಪ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಪಾಂಡವಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ.  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಸಹ ಪೂರ್ಣಗೊಂಡಿದ್ದು, ಈಗ ರೀರೆಕಾರ್ಡಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಇಂದ್ರಸೇನಾ ಅವರು ಸಂಗೀತ ನೀಡಿರುವ ಚಿತ್ರದ ಹಾಡುಗಲ ಸೀಡಿ ಬಿಡುಗಡೆಯಾಗಲಿದೆ.
   ಶಶಾಂಕ್ ರಾಜ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಆರ್.ವಿ.ನಾಗೇಶ್ವರ ರಾವ್ ಅವರ ಛಾಯಾಗ್ರಹಣವಿದೆ. ಸಂಜೀವ ರೆಡ್ಡಿ ಸಂಕಲನ, ನಾಗರಾಜ್ ನೃತ್ಯ ನಿರ್ದೇಶನ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ದೆಲೀಪ್ ದಿಲ್‌ಸೇ ರಚಿಸಿದ್ದಾರೆ. ಎ.ಆರ್.ಸಾಯಿರಾಂ ಸಂಭಾಷಣೆ ಬರೆದಿದ್ದಾರೆ. ಮೂರ್ತಿ ಅವರ ಸಹ ನಿರ್ಮಾಣವಿರುವ ಈ ಚಿತ್ರದ ತಾರಾಬಳಗದಲ್ಲಿ ಸೆಂಚುರಿ ಗೌಡ, ಗಡ್ಡಪ್ಪ, ಪವನ್, ಮೌನ, ಹೊನ್ನವಳ್ಳಿ ಕೃಷ್ಣ, ನಾಗರಾಜ ಕೋಟೆ, ಬಸವರಾಜ್ ಕಟ್ಟಿ, ಜಯರಾಂ, ಕುರಿ ಸುನೀಲ್ ಮುಂತಾದವರಿದ್ದಾರೆ
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮದ್ವೆ ದಿಬ್ಬಣದ ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.