Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರಿಯ 2 ಈ ವಾರ ರಾರಾಜಿಸಲು ಬರುತ್ತಿದೆ
Posted date: 09 Mon, Oct 2017 08:48:33 AM
 ಕರಿಯ 2 – ಅಂದಿನ ದಿನಗಳಲ್ಲಿ ಇತಿಹಾಸ ಪುಟ ಸೇರಿದ ‘ಕರಿಯ’ ಕನ್ನಡ ಸಿನಿಮಾ 14 ವರ್ಷಗಳ ನಂತರ ‘ಕರಿಯ 2’ ಎಂದು ರಜತ ಪರದೆಯ ಮೇಲೆ ರಾರಾಜಿಸಲು ಬರುತ್ತಿದೆ.
 
ಅಂದು ದರ್ಶನ್ ಅವರ ವೃತ್ತಿ ಬದುಕಿನಲ್ಲಿ ಮೈಲಿಗಲ್ಲಾದ ಸಿನಿಮಾ ಇಂದು ಸಂತೋಷ್ ಬಾಲರಾಜ್ ಅವರ ವೃತ್ತಿ ಜೀವನದಲ್ಲಿ ಒಂದು ಹೊಸ ಅಧ್ಯಾಯ ಶುರು ಆಗಲಿದೆ ಎಂದು ಚಿತ್ರೋಧ್ಯಮದ ಕೆಲವು ಮಂದಿ ಹಾಗೂ ಚಿತ್ರದ ಟೀಸರ್ ಹೇಳುತ್ತಿದೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಈ ಚಿತ್ರದ ಧ್ವನಿ ಸಾಂದ್ರಿಕೆ ಬಿಡುಗಡೆ ಸಮಾರಂಭಕ್ಕೆ ಬಂದು ಸಂತೋಷ್ ಅವರನ್ನು ಮನಸಾರೆ ಹರಿಸಿದ್ದರು.
 
‘ಗಣಪ’ ಸಿನಿಮಾ ಇಂದ ಸಂತೋಷ್ ಬಲರಾಜ್ ಅವರು ಸಾಹಸ ಸಿನಿಮಾಗಳಲ್ಲಿ ಎತ್ತಿದ ಕೈ ಎಂದು ತೋರಿಸಿ ಕೊಟ್ಟಿದ್ದಾರೆ. ಆ ಸಿನಿಮಾ ಸಹ ಗಲ್ಲ ಪೆಟ್ಟಿಗೆಯಲ್ಲಿ ಗೆದ್ದ ಸಿನಿಮಾ.
 
ಪಿ 2 ಪ್ರೊಡಕ್ಷನ್ ಅಡಿಯಲ್ಲಿ ಪರಮೇಶ್ ಹಾಗೂ ಪ್ರೇಮ್ ಅವರು ನಿರ್ಮಾಪಕರು. ಇವರ ಜೊತೆಗೆ ಸಂತೋಷ್ ಎಂಟೆರ್ಪ್ರೈಸಸ್ ಸಹ ಕೈಜೋಡಿಸಿದೆ.
 
ಪ್ರಭು ಶ್ರೀ ನಿವಾಸ್ ಅವರ ನಿರ್ದೇಶನದ ಚಿತ್ರಕ್ಕೆ ಕೃಪಾ ಕರಣ್ ಅವರ ಸಂಗೀತವಿದೆ. ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ಚಿನ್ಮಯಿ ಗೀತ ಸಾಹಿತ್ಯ ಒದಗಿಸಿದ್ದಾರೆ.
 
ಈಗಾಗಲೇ ಅನುಮಾನವೇ ಇಲ್ಲ....ನಾಲ್ಕು ಹಾಡುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ನಾ ಕಾಯುತಿರುವೆ....ಮಳೆಗಾಲದ,.....ಕರಿಯ ಬರ್ತಾವ್ನೆ....ಮಧುರವಾದ ಹಾಡುಗಳು ಈ ‘ಕರಿಯ 2’ ಚಿತ್ರದಲ್ಲಿದೆ.
 
 
ಸಂತೋಷ್ ಅವರಿಗೆ ನಾಯಕಿಯಾಗಿ ಜನಪ್ರಿಯ ನಟಿ ಮಯೂರಿ ಅವರು ಅಭಿನಯಿಸಿದ್ದಾರೆ. ತೆಲುಗು ಚಿತ್ರರಂಗದಿಂದ ಅಜಯ್ ಘೋಷ್ ಚಿತ್ರದ ಖಳ ನಟ. ಸಾಧು ಕೋಕಿಲ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ.
 
ಶ್ರೀನಿವಾಸ್ ದೇವಸ್ವಮ್ ಛಾಯಾಗ್ರಹಣ, ಶ್ರೀಕಾಂತ್ ಗೌಡ ಅವರ ಸಂಕಲನ ಒದಗಿಸಿದ್ದಾರೆ. ವಿಕ್ರಮ್, ರವಿ ವರ್ಮ, ಡಿಫರೆಂಟ್ ಡ್ಯಾನಿ, ಮಾಸ್ ಮಾಧ ಸಾಹಸ ಸಂಯೋಜನೆ ಮಾಡಿರುವರು.
 
 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರಿಯ 2 ಈ ವಾರ ರಾರಾಜಿಸಲು ಬರುತ್ತಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.