Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೀತಾ ಚಿತ್ರ ಎರಡು ಹಾಡುಗಳು ಮಾತ್ರ ಬಾಕಿ
Posted date: 25 Thu, Apr 2019 10:16:06 AM

ನಿರ್ಮಾಪಕರಾದ ಸೈಯದ್ ಸಲಾಂ ಮತ್ತು  ಶಿಲ್ಪಾ ಗಣೇಶ್ ಅವರ ಬ್ಯಾನರ್ ಗಳಾದ    ಎಸ್ ಎಸ್  ಫಿಲ್ಮ್ ಮತ್ತು ಗೋಲ್ಡನ್ ಮೂವೀಸ್ ಅಡಿಯಲ್ಲಿ  ಜಂಟಿಯಾಗಿ ನಿರ್ಮಿಸುತ್ತಿರುವ ಗೀತಾ ಚಿತ್ರದ ಮಾತಿನ  ಚಿತ್ರೀಕರಣ  ಮನಾಲಿ ,ಕೊಲ್ಕತ್ತಾ, ಮೈಸೂರು ,  ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ  ಮುಗಿದಿದ್ದು ಇನ್ನೂ ಎರಡು ಹಾಡುಗಳು ಮಾತ್ರ ಬಾಕಿ ಉಳಿದಿದೆ ....  ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್ ,  ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು  ಅಭಿನಯಿಸಿದ್ದಾರೆ    ..ಮಿಸ್ಟರ್ & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರದ ಸಹ ನಿರ್ದೇಶಕರು ಮತ್ತು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ .  ಖ್ಯಾತ ಸಂಗೀತ ನಿರ್ದೇಶಕ ಅನುಪ್  ರೂಬೆನ್ಸ್   ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿದ್ದಾರೆ .....ಶ್ರೀಶ ಕುಂದ್ರಳ್ಳಿ ಅವರ ಛಾಯಾಗ್ರಹಣವಿದೆ .


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೀತಾ ಚಿತ್ರ ಎರಡು ಹಾಡುಗಳು ಮಾತ್ರ ಬಾಕಿ - Chitratara.com
Copyright 2009 chitratara.com Reproduction is forbidden unless authorized. All rights reserved.