Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಿರ ತಾಯಿ ಮಗಳ ಸಂಬಂಧದ ಸಿನಿಮಾ ನಾಳೆಯಿಂದ
Posted date: 25 Thu, Jul 2019 09:45:41 AM

ದಿ ಜ್ಯಾಕ್ ಫ್ರೂಟ್ ಪ್ರೊಡಕ್ಷನ್ ಬ್ಯಾನರಿನ ಅಡಿಯಲ್ಲಿ, ಲಂಡನ್ನಿನಲ್ಲಿ ವಾಸವಾಗಿರುವ ಕನ್ನಡಿಗ ವಿವೇಕ್ ಕೋಡಪ್ಪ ಕೆಲವು ಸ್ನೇಹಿತರ ಜೊತೆ ಸೇರಿ ನಿರ್ಮಾಣ ಮಾಡಿರುವ ‘ಮಹಿರ’ ಚಿತ್ರ ನಾಳೆಯಿಂದ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ. ಆಕ್ಷನ್, ಥ್ರಿಲ್ಲರ್ ಜೊತೆಗೆ ತಾಯಿ ಮಗಳ ಸಂಬಂಧದ ಕುರಿತಾದ ಈ ಸಿನಿಮಾ ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿದೆ.
ಈ ಚಿತ್ರದಲ್ಲಿ ತಾಯಿ ಪಾತ್ರಧಾರಿ ವರ್ಜೀನಿಯರಾರ್ಡ್ರಿಗೆಸ್ ಕೆಲವು ಮಾರ್ಷಲ್ ಆರ್ಟ್ಸ್ ಸಾಹಸಗಳನ್ನು ಎರಡು ತಿಂಗಳಿನಲ್ಲಿ ಕಲಿತು ನೈಜತೆಗೆ ಹತ್ತಿರವಾಗಿ ಅಭಿನಯ ನೀಡಿದ್ದಾರೆ. ಚೈತ್ರ ಆಚಾರ್, ರಾಜ್ ಬಿ ಶೆಟ್ಟಿ, ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಕೆ ಎಸ್ ಶ್ರೀಧರ್, ದಿಲೀಪ್ ರಾಜ್, ಬಾಬು ಹಿರಣ್ಣಯ್ಯ, ಅಪೂರ್ವ ಸೋಮ, ಶೌಕತ್ ಅಲಿ ತಾರಗಣದಲ್ಲಿದ್ದಾರೆ.

ಕೀರ್ತನ್ ಪೂಜಾರಿ ಛಾಯಾಗ್ರಹಣ, ನೀಲಿಮ ರಾವ್ ಮತ್ತು ರಾಕೇಶ್ ಯು ಪಿ ಸಂಗೀತ, ಮಿದುನ್ ಮುಕುಂದನ್ ಹಿನ್ನಲೆ ಸಂಗೀತ, ಚೇತನ್ ಡಿಸೋಜ ಸಾಹಸ, ಆಶಿಕ್ ಕೂಸುಗೊಳ್ಳಿ ಸಂಕಲನ, ರಜಾಕ್, ಸಂದೀಪ್ ಸುಂಕದ, ಮಹೇಶ್ ಗೌಡ ಸಂಭಾಷಣೆ ಒದಗಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಿರ ತಾಯಿ ಮಗಳ ಸಂಬಂಧದ ಸಿನಿಮಾ ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.