Chief Editor
Manohar. R (Manu)
Photo Journalist
chitrataramanu@gmail.com
+91 9845549026
` ಹರಿಕಥೆ ಅಲ್ಲ ಗಿರಿಕಥೆ` ಹೇಳುತಾರಂತೆ ರಿಷಬ್ ಶೆಟ್ಟಿ..
Posted date: 26 Fri, Jun 2020 12:00:55 PM
ನಿರ್ದೇಶಕರಾಗಿ ಕನ್ನಡ ಸಿನಿರಸಿಕರ ಮನಸೂರೆಗೊಂಡಿದ್ದ ರಿಷಬ್ ಶೆಟ್ಟಿ, ನಂತರದ ದಿನಗಳಲ್ಲಿ ನಾಯಕ ನಟನಾಗೂ ಯಶಸ್ವಿಯಾದರು .
  ಈಗ ರಿಷಬ್ ಶೆಟ್ಟಿ 'ಹರಿಕಥೆ ಅಲ್ಲಾ ಗಿರಿಕಥೆ' ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. 
ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಅವರು ರಿಷಬ್ ಶೆಟ್ಟಿ ಫಿಲಂಸ್ ಸಹಭಾಗಿತ್ವದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ಜೂನ್ 19ರಂದು ರಿಷಬ್ ಶೆಟ್ಟಿ ಅವರ ಕಚೇರಿಯಲ್ಲಿ ಸರಳವಾಗಿ ನೆರವೇರಿತು.
ದೇವರಮೇಲೆ ಸೆರೆಹಿಡಿಯಲಾದ ಮೊದಲ ದೃಶ್ಯಕ್ಕೆ ರಿಷಬ್ ಶೆಟ್ಟಿ ಪುತ್ರ ಮಾಸ್ಟರ್ ರಣವೀತ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕ ಸಂದೇಶ್ ಎನ್  ಕ್ಯಾಮೆರಾ ಚಾಲನೆ ಮಾಡಿದರು. 
ಪ್ರಗತಿ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ವಿತರಕ ಜಯಣ್ಣ, ಕೆ.ಆರ್ ಪೇಟೆ ಮಂಜಣ್ಣ ಮುಂತಾದವರು ಈ ಸರಳ ಪೂಜ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಕೋರಿದರು. 
'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡಿದ್ದ, ಗಿರಿಕೃಷ್ಣ ಈ ಚಿತ್ರದ ನಿರ್ದೇಶಕರು. ಮೂಲತಃ ನಟರಾಗಿದ್ದ ಇವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. 
'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಗಿರಿಕೃಷ್ಣ ಅವರು ನಟಿಸಿದ್ದು,  ರಿಷಬ್ ಶೆಟ್ಟಿ ನಿರ್ದೇಶಿಸಿದ್ದರು.
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ  ನಾಯಕರಾಗಿ ನಟಿಸುತ್ತಿದ್ದು, ಗಿರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ‌.
'ಕಿರಿಕ್ ಪಾರ್ಟಿ' ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಸುಮಧುರ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. 'ಕಥಾ ಸಂಗಮ' ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ರಂಗನಾಥ್ ಸಿ.ಎಂ ಈ ಚಿತ್ರದ ಛಾಯಾಗ್ರಹಕರು.
ಉಳಿದ ತಾರಾಬಳಗ ಹಾಗು ತಾಂತ್ರಿಕ ವರ್ಗದ ಮಾಹಿತಿ ಸದ್ಯದಲ್ಲೇ ತಿಳಿಸಲಾಗುವುದು. 

ನೂತನ ಚಿತ್ರದ ಚಿತ್ರೀಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿದ ಕೂಡಲೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ .

Kannada Cinema's Latest Wallpapers
Kannada Cinema's Latest Videos
Kannada Movie/Cinema News - ` ಹರಿಕಥೆ ಅಲ್ಲ ಗಿರಿಕಥೆ` ಹೇಳುತಾರಂತೆ ರಿಷಬ್ ಶೆಟ್ಟಿ.. - Chitratara.com
Copyright 2009 chitratara.com Reproduction is forbidden unless authorized. All rights reserved.