Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಅನುಷ್ಕ ` ಚಿತ್ರದ ಚಿತ್ರೀಕರಣ ಮುಕ್ತಾಯ
Posted date: 15 Mon, Oct 2018 08:46:42 AM

ಶ್ರೀನಂಜುಂಡೇಶ್ವರ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಎಸ್.ಕೆ.ಗಂಗಾಧರ್ ಅವರು ನಿರ್ಮಿಸುತ್ತಿರುವ ‘ಅನುಷ್ಕ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರವೀಂದ್ರ ಮುದ್ದಿ ಅವರು ಬರೆದಿರುವ ‘ಇವಳೇ ನೋಡು ನಮ್ಮ ತಾಯಿ‘ ಎಂಬ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ. ಅಮೃತ ಅಯ್ಯಂಗಾರ್ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು. ಈ ಹಾಡಿನ ಚಿತ್ರೀಕರಣದೊಂದಿಗೆ ‘ಅನುಷ್ಕ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಅರಸಿಕೆರೆ ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರಕ್ಕೆ ೭೨ದಿನಗಳ ಚಿತ್ರೀಕರಣ ನಡೆದಿದೆ.
ದೇವರಾಜ್‌ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ವಿಕ್ರಂ ಸೆಲ್ವ ಸಂಗೀತ ನಿರ್ದೇಶನ, ಶ್ರೀಧರ್ ಸಂಕಲನ, ಅಶೋಕ್, ಸಿದ್ದಾರಾಜು, ನರಸಿಂಹ, ಚಂದ್ರು ಸಾಹಸ ನಿರ್ದೇಶನ, ಅವಿನ್ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ರೂಪೇಶ್ ಶೆಟ್ಟಿ, ಅಮೃತ ಅಯ್ಯಂಗಾರ್, ರೂಪ ಶರ್ಮ, ಬಾಲರಾಜ್, ಆದಿಲೋಕೇಶ್ ಮುಂತಾದವರಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಅನುಷ್ಕ ` ಚಿತ್ರದ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.