ಸಿದ್ಧಿ ಎಂಟರ್‌ಟೈನ್‌ಮೆಂಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ `ಓಲ್ಡ್ ಮಾಂಕ್` ಸಿನಿಮಾಕ್ಕೆ ನೂತನ ಕಲಾವಿದರ ಆಯ್ಕೆಗಾಗಿ ಬೆಂಗಳೂರಿನ ಎಂ. ಇ. ಎಸ್ ಕಾಲೇಜು, ಮಲ್ಲೇಶ್ವರಂ ನಲ್ಲಿ ದಿನಾಂಕ 29/12/2019 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಕಲಾವಿದರ ಆಡಿಶನ್ ಆಯೋಜಿಸಲಾಗಿದ್ದು ಆಸಕ್ತ ಕಲಾವಿದರು ಆಡಿಶನ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಲಾವಿದರ ವಯೋಮಿತಿ 7 ರಿಂದ 15 ವರ್ಷದೊಳಗಿನ ಮಕ್ಕಳು, 15 ರಿಂದ 50 ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು, 50 ವರ್ಷ ಮೇಲ್ಪಟ್ಟ ವಯೋವೃದ್ಧರು ಈ ಆಡಿಶನ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರದೀಪ್ ಶರ್ಮಾರವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಶ್ರೀನಿವಾಸ ಕಲ್ಯಾಣ ಹಾಗೂ ಬೀರ್‌ಬಲ್ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟರಾದ ಎಮ್. ಜಿ. ಶ್ರೀನಿಯವರು ನಾಯಕನಟನಾಗಿ ಹಾಗೂ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರಕ್ಕೆ ಸೌರವ್ – ವೈಭವ್ ರವರು ಸಂಗೀತ ನೀಡಿದ್ದು, ಶ್ರೀಶ ಕುಡುವಳ್ಳಿಯವರ ಛಾಯಾಗ್ರಹಣವಿದ್ದು, ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಹಾಗೂ ಪ್ರಸನ್ನ ವಿ. ಎಮ್ ಸಂಭಾಷಣಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಸಂತೋಷ್ ನಂದಕುಮಾರ್, ಪ್ರಸನ್ನ ವಿ. ಎಂ ಹಾಗೂ ಶ್ರೀನಿ ಯವರು ಕಥೆಯನ್ನು ರಚಿಸಿದ್ದಾರೆ.
*OLDMONK AUDITIONS* DETAILS
#12TH *MANGALORE*