Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಕಂಡ್ಹಿಡಿ ನೋಡೋಣ` ಚಿತ್ರ ತಂಡಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಸಾಥ್
Posted date: 01 Thu, Aug 2019 01:29:27 PM

ಇತ್ತೀಚೆಗೆ ಸಿನಿಮಾಗಳಿಗೆ ಟೈಟಲ್ ಇಡುವುದೇ ಒಂದು ಫ್ಯಾಷನ್ಆಗಿದೆ ಹಾಗೆ ಚಿತ್ರ ವಿಚಿತ್ರ ಶೀರ್ಷಿಕೆಗಳು ಅನಾವರಣಗೊಳ್ಳುತ್ತಿವೆ.

ಇದೇ ನಿಟ್ಟಿನಲ್ಲಿ ಒಂದು ವಿಭಿನ್ನ ಶೀರ್ಷಿಕೆ ಹೊತ್ತ ಚಿತ್ರವೊಂದು ಸೆಟ್ಟೇರಿ ಬಹುತೇಕ ಸುಮಾರು ಅರವತ್ತರಷ್ಟು ಚಿತ್ರೀಕರಣ ಮುಗಿಸಿದೆ ಹಾಗಾದರೆ ಚಿತ್ರದ ಟೈಟಲ್ ಏನೆಂದು ಕಂಡ್ಹಿಡಿರೀ ನೋಡೋಣ ಹೌದು ಚಿತ್ರದ ಹೆಸರೇ "ಕಂಡ್ಹಿಡಿ ನೋಡೋಣ"

ಶೀರ್ಷಿಕೆಯೇ ಬಹು ಹಾಸ್ಯಮಯವಾಗಿದೆ ಚಿತ್ರವೂ ಕೂಡ ಶೀರ್ಷಿಕೆಯಂತೆ ಹಾಸ್ಯಮಯದ ಜೊತೆಗೆ ಒಂದಷ್ಟು ಆಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಆಗಿದೆಯಂತೆ.

ನಿರ್ದೇಶಕ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಹಾಗೂ ದಿವ್ಯ ಚಂದ್ರದರ್ ಮತ್ತು ಯೋಗೇಶ್ ಗೌಡ ರವರ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ.

ನಿರ್ದೇಶಕ ನಾಗೇಂದ್ರ ಅರಸ್ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಇನ್ನು ಚಿತ್ರದ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿರುವುದು

ಮ್ಯಾನ್ಲಿಯೋ ಪ್ರೊಡಕ್ಷನ್ ಮಾಲೀಕ ಹಾಗೂ  ನಾಯಕ ನಟ ಪ್ರಣವ್ ರವರದ್ದು.

ಪ್ರಣವ್ ಈಗಾಗಲೇ ಸೈಕೋ ಶಂಕರ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಈಗ ಚಿತ್ರದಲ್ಲೂ ಒಬ್ಬ ಮದ್ಯಮ ಕುಟುಂಬದಲ್ಲಿ ಹುಟ್ಟಿ ಐಶಾರಾಮಿಯ ಕನಸುಗಳ ಕಾಣುವ ಹುಡುಗನಾಗಿ ಪ್ರಣವ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

 ಮಾದ್ಯಮದಲ್ಲಿ ಸಿನಿಮಾ ರಿಪೋರ್ಟರ್ ಆಗಿದ್ದ ಆದರ್ಶ  ಚಿತ್ರದಲ್ಲಿ ಎರಡನೇ ನಾಯಕನಾಗಿ ಅಭಿನಯಿಸಿದ್ದಾರೆ.

ಹಾಗೂ ಜಯಸಿಂಹ ಮುಸುರಿ ಕೂಡ ಚಿತ್ರದಲ್ಲಿ ಒಂದು ವಿಭಿನ್ನವಾದ ಅವರು ವರೆಗೆ ಮಾಡದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.

ಹಾಗೆ ಹಿರಿಯ ನಟಿ ಗಿರಿಜಾ ಲೋಕೇಶ್, ವಿಜಯ್ ಚಂಡೂರ್, ಅರುಣ್ ಹಾಗೂ ನಟಿಯರಾಗಿ ಪ್ರಿಯಾಂಕ ಮಲಾಲಿ, ಮಾಣಿಕ್ಯ ಹಾಗೂ ಶಿಲ್ಪ ಬರಿಕೆ ಮುಂತಾದವರು ಚಿತ್ರದ ತಾರಾಗಣದಲ್ಲಿ ಇದ್ದಾರೆ.

ಇದೊಂದು ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾದರೂ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಜೊತೆಗೆ ಪ್ರೀತಿ, ಪ್ರೇಮ, ಪ್ರಣಯ, ಹಾಸ್ಯ ಮತ್ತು ಆಕ್ಷನ್ ಹೀಗೇ ಸಂಪೂರ್ಣ  ಮನರಂಜನೆ ಚಿತ್ರ ಇದಾಗಿದೆ ಎಂದು ಚಿತ್ರ

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕಂಡ್ಹಿಡಿ ನೋಡೋಣ` ಚಿತ್ರ ತಂಡಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಸಾಥ್ - Chitratara.com
Copyright 2009 chitratara.com Reproduction is forbidden unless authorized. All rights reserved.