ಪಂಚಮುಖಿ ಹನುಮಾನ್ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಎ.ವಿನೋದ್ ಅವರು ನಿರ್ಮಿಸಿರುವ ‘ಕೆಂಪೇಗೌಡ 2‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೋಮಲ್ ಕುಮಾರ್ ನಾಯಕಾರಾಗಿ ನಟಿಸಿರುವ ಈ ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ ಬರೆದಿರುವ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕೆ.ವಿ.ರಾಜು, ಶ್ರೀನಾಥ್ ಎಂ.ಎಸ್ ಹಾಗೂ ನಂಜುಂಡ ಅವರು ಬರೆದಿದ್ದಾರೆ.
Rosh ಮೋಹನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವರುಣ್ ಉನ್ನಿ ಅವರ ಸಂಗೀತ ನಿರ್ದೇಶನವಿದೆ. ಸಿ.ರವಿಚಂದ್ರ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಅಂಬು ಅರಿವು, ಥ್ರಿಲ್ಲರ್ ಮಂಜು, ಜಾಲಿ ಬಾಸ್ಟಿನ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್ ಕುಮಾರ್, ಶ್ರೀಶಾಂತ್(ಕ್ರಿಕೆಟ್), ಯೋಗಿ(ಲೂಸ್‌ಮಾದ), ರಕ್ಷಿಕ ಶರ್ಮ, ಆಲಿ, ಚೇತನ್ ಶರ್ಮ, ಲೋಹಿತಾಶ್ವ, ಸುಚೇಂದ್ರಪ್ರಸಾದ್ ಮುಂತಾದವರಿದ್ದಾರೆ.
ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ‘ಜೈಹೋ ಪರಬ್ರಹ್ಮ ಚಿತ್ರದ ಸ್ಕ್ರಿಪ್ಟ್ ಪೂಜೆ
ಮೈಸೂರು ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಎಸ್.ಮಧುಮಾಲತಿ ಮತ್ತು ಶಶಿರೇಖ ಅವರು ನಿರ್ಮಿಸುತ್ತಿರುವ ‘ಜೈಹೋ ಪರಬ್ರಹ್ಮ‘ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಚಾಮರಾಜಪೇಟೆ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಅನೇಕ ಸದಸ್ಯರು ಈ ಪೂಜ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಈ ಹಿಂದೆ ‘ಜಮಾನ‘, ‘ಗುಡ್ ಬೈ‘, ಹಾಗೂ ಸದ್ಯದಲ್ಲೇ ತೆರೆಗೆ ಬರಲಿರುವ ‘ದಿಗ್ದರ್ಶಕ‘ ಚಿತ್ರಗಳಲ್ಲಿ ಅಭಿನಯಿಸಿರುವ ಜಯಪ್ರಕಾಶ್ ಅವರು ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶನವನ್ನು ಜಯಪ್ರಕಾಶ್ ಅವರೆ ಮಾಡುತ್ತಿದ್ದಾರೆ. ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಬಿಸುವುದಾಗಿ ಜಯಪ್ರಕಾಶ್ ಅವರು ತಿಳಿಸಿದ್ದಾರೆ. ವೈಶಾಖ್ ಶಶಿಧರನ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಶಿವು ಅವರ ಸ್ಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಚೇತನ್ ಕುಮಾರ್.